ಬಳ್ಳಾರಿ: ಬೈಕ್‌ಗೆ ಹಿಂದಿನಿಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲಿಯೇ ಮೃತ ಪಟ್ಟಿರುವ ಘಟನೆ ನಗರದ ಕೌಲಬಜಾರ್ ಪ್ರದೇಶಕ್ಕೆ ಹೋಗುವ ಓವರ್ ಬ್ರಿಡ್ಜ್ನಲ್ಲಿ ನಡೆದಿದೆ. ಮೃತರು ಮೂರಾರ್ಜಿ ದೇಸಾಯಿ ಶಾಲೆಯ ಶಿಕ್ಷಕ ವೀರೇಶ್(40), ಆತನ ಪತ್ನಿ ಅಂಜಲಿ(35), ಮಗ (6) ದಿನೇಶ್ ಎಂದು ಗುರುತಿಸಲಾಗಿದೆ.
ತಮ್ಮ ಊರು ಯರಗುಡಿಯಿಂದ ಬಳ್ಳಾರಿಯ ಗಫೂರ್ ಟವರ್ ಬಳಿ ಇರುವ ತಮ್ಮ ಮನೆಗೆ ಬೈಕ್‌ನಲ್ಲಿ ಬರುತ್ತಿದ್ದರು. ನಗರದ ಏಳುಮಕ್ಕಳು ತಾಯಿಯಮ್ಮ ಗುಡಿ ಎದುರುಗಡೆಯಿಂದ ಓವರ್ ಬ್ರಿಡ್ಜ್ ಕಡೆ ಹೋಗುತ್ತಿರುವಾಗ ಹಿಂದಿನಿಂದ ಬಂದ ಟಿಪ್ಪರ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಡ, ಹೆಂಡತಿ ಮತ್ತು ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಗಳು ಹನಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.