ಹೊಸಪೇಟೆ :ವಿಶ್ವವಿಖ್ಯಾತ ಹಂಪಿಯಲ್ಲಿ ಇಂದಿನಿಂದ ಪ್ರವಾಸಿಗರಿಗೆ ಆಫ್ಲೈನ್ ಟಿಕೆಟ್ ಸೌಲಭ್ಯ ಒದಗಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮುಂದಾಗಿದೆ.
ಹಂಪಿಯ ಕಮಲಮಹಲ್, ಕಮಲಾಪುರದ ವಸ್ತುಸಂಗ್ರಹಾಲಯ, ವಿಜಯವಿಠ್ಠಲ ದೇವಸ್ಥಾನ ಸ್ಮಾರಕಗಳನ್ನು ವೀಕ್ಷಣೆ ಮಾಡಲು ಈ ಹಿಂದೆ ಆನ್ಲೈನ್ ಮೂಲಕ ಬುಕ್ ಮಾಡಬೇಕಿತ್ತು. ಕೊರೊನಾ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಒಂದು ದಿನಕ್ಕೆ 2000 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.