ಬಳ್ಳಾರಿ:ಜಿಲ್ಲೆಯ ಮೂರು ನಾಲ್ಕು ಶಾಸಕರು ಬಿಜೆಪಿಗೆ ಬರಲಿದ್ದಾರೆ ಎಂದು ಬಿಜೆಪಿ ಶಾಸಕ ಜಿ ಸೋಮಶೇಖರ ರೆಡ್ಡಿ ಅವರು ಹೊಸ ಬಾಂಬ್ ಸಿಡಿಸಿದ್ದಾರೆ. ಸ್ಕ್ಯಾಮ್ ಸಿದ್ದರಾಮಯ್ಯ ಅಭಿಯಾನ ಮತ್ತು ಕಾಂಗ್ರೆಸ್ ವಿರುದ್ಧ ಕರೆ ಕೊಟ್ಟಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ ಶಾಸಕರು ಮಾತನಾಡಿ, ಜಿಲ್ಲೆಯ ಮೂರ್ನಾಲ್ಕು ಜನ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುವುದಕ್ಕೆ ಚರ್ಚೆ ನಡೆಸುತ್ತಿದ್ದಾರೆ. ಚುನಾವಣೆಗೂ ಮುನ್ನ ಬಹಳ ಜನರು ಬರುತ್ತಾರೆ.
ಶಾಸಕ ಜಿ ಸೋಮಶೇಖರ್ ರೆಡ್ಡಿ ಅವರು ಮಾತನಾಡಿದರು ಸಿನಿಮಾ ಈಗ ಸ್ಟಾರ್ಟ್ ಆಗಿದೆ, ಮುಂದೆ ನೋಡಿ ನಿಮಗೆ ಗೊತ್ತಾಗುತ್ತದೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ. ಬಿಜೆಪಿಯಲ್ಲಿದ್ದವರು ಕಾಂಗ್ರೆಸ್ಗೆ ಹೋಗಿದ್ದಾರೆ. ಅವರು ನಮ್ಮನ್ನು ಕಾಂಗ್ರೆಸ್ಗೆ ಆಹ್ವಾನಿಸುವುದೇನು? ಅವರೇ ಬಿಜೆಪಿಗೆ ಸೇರಲಿದ್ದಾರೆ. ಈಗಾಗಲೇ ಜಿಲ್ಲೆಯ ಮೂರ್ನಾಲ್ಕು ಜನ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುವುದಕ್ಕೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಸೋಮಶೇಖರ ರೆಡ್ಡಿ ತಿಳಿಸಿದ್ದಾರೆ.
ಕಾಂಗ್ರೆಸ್ ಮುಳುಗುವ ಹಡುಗು, ಅಲ್ಲಿಗೆ ಹೋಗುವುದಕ್ಕೆ ಚಾನ್ಸೇ ಇಲ್ಲ. ರಾಹುಲ್ ಗಾಂಧಿ ಅವರು ಐರನ್ ಲೆಗ್ ಇದ್ದಂತೆ, ಅವರು ಬಳ್ಳಾರಿ ಬಂದರೆ ನಮ್ಮ ಗೆಲುವು ಖಚಿತ. ಇಲ್ಲಿ ಭಾರತ ಜೋಡೋ ಯಾತ್ರೆ ನಡೆಸುತ್ತಿದ್ದಾರೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ತೋಡೋ ಯಾತ್ರೆ ನಡೆಯುತ್ತಿದೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ತೋಡೋ ಯಾತ್ರೆ: ಈಗ ಸಿನಿಮಾ ಆರಂಭವಾಗಿದೆ. ಮುಂದೆ ಬಹಳ ಇದೆ. ಯಾರು ಎಲ್ಲಿಗೆ ಹೋಗುತ್ತಾರೆ ಮುಂದೆ ತಿಳಿಯಲಿದೆ. ಕಾಂಗ್ರೆಸ್ ಮುಳುಗುವ ಹಡುಗು. ಅಲ್ಲಿಗೆ ಹೋಗುವುದಕ್ಕೆ ಚಾನ್ಸೇ ಇಲ್ಲ. ರಾಹುಲ್ ಗಾಂಧಿ ಅವರು ಐರನ್ ಲೆಗ್ ಇದ್ದಂತೆ. ಅವರು ಬಳ್ಳಾರಿ ಬಂದರೆ ನಮ್ಮ ಗೆಲುವು ಖಚಿತ. ಇಲ್ಲಿ ಭಾರತ ಜೋಡೋ ಯಾತ್ರೆ ನಡೆಯುತ್ತಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ತೋಡೋ ಯಾತ್ರೆ ನಡೆಯುತ್ತಿದೆ ಎಂದು ಲೇವಡಿ ಮಾಡಿದರು.
ರಾಹುಲ್ ಗಾಂಧಿ ಐರನ್ ಲೆಗ್ ಇದ್ದಂತೆ. ಕಳೆದ ಬಾರಿ ಬಳ್ಳಾರಿಗೆ ಬಂದ್ರು ಕಾಂಗ್ರೆಸ್ ಪಕ್ಷ ಸೋತು ಹೋಯ್ತು. ಈ ಬಾರಿಯೂ ಬಳ್ಳಾರಿಗೆ ಬಂದರೆ ನಮ್ಮ ಗೆಲುವು ಖಚಿತ ಎಂದ ಶಾಸಕ ಸೋಮಶೇಖರ್ ಜನಾರ್ದನ ಎಲ್ಲಿಯೂ ಸ್ಪರ್ಧೆ ಮಾಡೋದಿಲ್ಲ. ಅವಳಿ ಜಿಲ್ಲೆಯ ಹತ್ತು ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸ್ಕ್ಯಾಮ್ ರಾಮಯ್ಯ ಪೋಸ್ಟರ್ ಅಭಿಯಾನ: ಬಳ್ಳಾರಿ ಬಿಜೆಪಿ ಘಟಕದಿಂದ ಸ್ಕ್ಯಾಮ್ ರಾಮಯ್ಯ ಪೋಸ್ಟರ್ ಅಭಿಯಾನವನ್ನು ನಗರದ ಗಡಗಿ ಚೆನ್ನಪ್ಪ ಸರ್ಕಲ್ನಲ್ಲಿ ಹಮ್ಮಿಕೊಂಡಿದ್ದರು. ಕಾರ್ಯಕರ್ತರು ಮತ್ತು ಮುಖಂಡರು ಸ್ಕ್ಯಾಮ್ ರಾಮಯ್ಯ ಪೋಸ್ಟರ್ ಅಂಟಿಸಿದರು. ಶಾಸಕ ಜಿ. ಸೋಮಶೇಖರ್ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಯಿತು.
ಓದಿ:2023ರ ವಿಧಾನಸಭಾ ಚುನಾವಣೆ ಅಖಾಡಕ್ಕೆ ರೆಡಿಯಾಗುತ್ತಿರುವ ಜೆಡಿಎಸ್!