ಕರ್ನಾಟಕ

karnataka

ETV Bharat / state

ವಿಜಯನಗರ: ಕಲುಷಿತ ನೀರು ಸೇವನೆ ಪ್ರಕರಣ.. ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ - contaminated water

ವಿಜಯನಗರ ಜಿಲ್ಲೆ ಹೂವಿನಹಡಗಲಿಯ ಮಕರಬ್ಬಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡ ಗ್ರಾಮಸ್ಥರ ಪೈಕಿ ಇಂದು ಮತ್ತಿಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ಮೂರಕ್ಕೆ ಏರಿದೆ‌.

three dies after drinking contaminated water in vijayanagar
ಕಲುಷಿತ ನೀರು ಸೇವಿಸಿ ಸಾವು

By

Published : Oct 3, 2021, 3:50 PM IST

ಹೊಸಪೇಟೆ(ವಿಜಯನಗರ):ಜಿಲ್ಲೆಯ ಹೂವಿನಹಡಗಲಿಯ ಮಕರಬ್ಬಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಗ್ರಾಮಸ್ಥರು ಅಸ್ವಸ್ಥಗೊಂಡ ಪ್ರಕರಣದ ಸಾವಿನ ಸಂಖ್ಯೆ ಮೂರಕ್ಕೆ ಏರಿದೆ‌.

ಇದನ್ನೂ ಓದಿ:ವಿಜಯನಗರ: ಕಲುಷಿತ ನೀರು ಕುಡಿದು ವೃದ್ಧ ಸಾವು - ಮತ್ತೊಬ್ಬರ ಸ್ಥಿತಿ ಗಂಭೀರ

ಬಳ್ಳಾರಿ ವಿಮ್ಸ್​​ನಲ್ಲಿ ಲಕ್ಷ್ಮಮ್ಮ, ಹಾವನೂರು ಬಸಮ್ಮ ವಾಂತಿ ಭೇದಿಯಿಂದ ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕಲುಷಿತ ನೀರು ಕುಡಿದ ಪರಿಣಾಮ ಬೆಳವಿಗಿ ನೀಲಪ್ಪ ವಾಂತಿ ಭೇದಿಯಿಂದ ಸಾವನ್ನಪ್ಪಿದ್ದರು.

ಕಳೆದ 20 ದಿನಗಳ ಹಿಂದೆ ಕಲುಷಿತ ನೀರು ಕುಡಿದು 200ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದರು.‌ ಇವರೆಲ್ಲಾ ಬಳ್ಳಾರಿ, ಹೊಸಪೇಟೆ, ಹುಬ್ಬಳ್ಳಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ:ವಿಜಯನಗರ: ಕಲುಷಿತ ನೀರು ಕುಡಿದು 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ABOUT THE AUTHOR

...view details