ಹೊಸಪೇಟೆ (ವಿಜಯನಗರ): ಹತ್ತು ದಿನಗಳ ಅಂತರದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದು, ಅದರಲ್ಲಿ ಇಬ್ಬರು ಕೊರೊನಾಗೆ ಬಲಿಯಾಗಿರುವ ಹೃದಯವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ.
ಹತ್ತು ದಿನಗಳ ಅಂತರದಲ್ಲಿ ಅಪ್ಪ, ಮಗ, ಮಗಳು ಸಾವು! - ಒಂದೇ ಕುಟುಂಬದ ಇಬ್ಬರು ಕೊರೊನಾದಿಂದ ಸಾವು
ಮೇ 28ರಂದು ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಕ್ಯಾರೋಲಿನ್ ಲೂಸಿಯಾ ಸ್ಮಿತ್(45) ಹಾಗೂ ಮೇ 29ರಂದು ಸಹೋದರ ಸಾವಿಯೋ ಸ್ಮಿತ್(42) ಇಬ್ಬರು ಒಂದು ದಿನದ ಅಂತರದಲ್ಲಿ ಕರೊನಾದಿಂದ ಸಾವನ್ನಪ್ಪಿದ್ದರು. ನಿನ್ನೆ ರಾತ್ರಿ ಇವರ ತಂದೆಯೂ ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಒಂದೇ ಕುಟುಂಬದ ಅಪ್ಪ, ಮಗ, ಮಗಳು ಸಾವು
ನಗರದ ನಿವಾಸಿ ಬೇರಿ ಸ್ಮೀತ್(70) ಹೃದಯಾಘಾತದಿಂದ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ. ಹತ್ತು ದಿನಗಳ ಅಂತರದಲ್ಲ ತಂದೆ, ಮಗಳು, ಮಗ ಮೂವರು ಸಾವನ್ನಪ್ಪಿದ್ದು, ಕುಟುಂಬಕ್ಕೆ ಬರಸಿಡಿಲು ಬಡದಂತಾಗಿದೆ.
ಮೇ 28ರಂದು ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಕ್ಯಾರೋಲಿನ್ ಲೂಸಿಯಾ ಸ್ಮಿತ್(45) ಹಾಗೂ ಮೇ 29ರಂದು ಸಹೋದರ ಸಾವಿಯೋ ಸ್ಮಿತ್(42) ಇಬ್ಬರೂ ಒಂದು ದಿನದ ಅಂತರದಲ್ಲಿ ಕೊರೊನಾದಿಂದ ಸಾವನ್ನಪ್ಪಿದ್ದರು. ಮೊದಲು ಸಾವಿಯೋ ಸ್ಮಿತ್ ಅವರಿಗೆ ಕೊರೊನಾ ಬಂದಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದರು. ಈಗ ತಂದೆ ಸಾವಿಗೀಡಾಗಿದ್ದಾರೆ.
Last Updated : Jun 5, 2021, 12:12 PM IST