ಕರ್ನಾಟಕ

karnataka

ETV Bharat / state

ಕಾರಿಗೆ ಲಾರಿ ಡಿಕ್ಕಿ: ಶಿವರಾತ್ರಿಯಂದೇ ಸಾವಿನ ಮನೆ ಸೇರಿದ ಮೂವರು - ಬಳ್ಳಾರಿಯಲ್ಲಿ ಕಾರಿಗೆ ಲಾರಿ ಡಿಕ್ಕಿ ಸುದ್ದಿ

ಬಳ್ಳಾರಿ ನಗರದ ಹೊರವಲಯದ ಬೈಪಾಸ್​ ಬಳಿ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದಾರೆ.

ಶಿವರಾತ್ರಿಯಂದೇ ಶಿವನಪಾದ ಸೇರಿದ ಮೂವರು
ಶಿವರಾತ್ರಿಯಂದೇ ಶಿವನಪಾದ ಸೇರಿದ ಮೂವರು

By

Published : Mar 12, 2021, 10:51 AM IST

ಬಳ್ಳಾರಿ: ನಗರದ ಹೊರವಲಯದ ಬೈಪಾಸ್​ ಬಳಿ ನಿನ್ನೆ ರಾತ್ರಿ ಶಿವನ ದರ್ಶನ ಪಡೆದು ಊರಿಗೆ ವಾಪಸ್​ ಹೋಗುತ್ತಿದ್ದ ವೇಳೆ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದಾರೆ.

ಮೃತರು ಬಳ್ಳಾರಿ ತಾಲೂಕಿನ ಎರಂಗಳಿ ಗ್ರಾಮದ ತಿರುಮಲ (25), ಪ್ರಕಾಶ (14), ಶರತ್ (25) ಎಂದು ಗುರುತಿಸಲಾಗಿದೆ. ವೆಂಕಟೇಶ, ಮಲ್ಲಿಕಾರ್ಜುನ, ಲಿಂಗೇಶ್ ಎಂಬ ಮೂವರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಬಳ್ಳಾರಿ ವಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಕಾಲುವೆಯಲ್ಲಿ ಕಾರು ಮುಳುಗಿ ಮೂವರು ಸಾವು

ABOUT THE AUTHOR

...view details