ಕರ್ನಾಟಕ

karnataka

ETV Bharat / state

ಮಡಿಲು ಕಿಟ್​ ಯೋಜನೆ ಪುನಾರಂಭಕ್ಕೆ ಚಿಂತನೆ.. ಆರೋಗ್ಯ ಸಚಿವರ ಹೇಳಿಕೆ - B. Sriramulu, Minister of Health and Family Welfare

ರಾಜ್ಯದಲ್ಲಿ ಮಡಿಲು ಕಿಟ್ ಯೋಜನೆ ಪುನರ್ ಆರಂಭಕ್ಕೆ ಚಿಂತನೆ ನಡೆಸುವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ರಾಜ್ಯದಲ್ಲಿ ಮಡಿಲು ಕಿಟ್ ಯೋಜನೆಯ ಪುನರ್ ಆರಂಭಕ್ಕೆ ಚಿಂತನೆ ನಡೆಸುವೆ: ಸಚಿವ ಶ್ರೀರಾಮುಲು

By

Published : Sep 5, 2019, 8:56 PM IST


ಬಳ್ಳಾರಿ:ರಾಜ್ಯದಲ್ಲಿ ಮಡಿಲು ಕಿಟ್ ಯೋಜನೆ ಪುನರ್ ಆರಂಭಕ್ಕೆ ಚಿಂತನೆ ನಡೆಸುವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ರಾಜ್ಯದಲ್ಲಿ ಮಡಿಲು ಕಿಟ್ ಯೋಜನೆಯ ಪುನರ್ ಆರಂಭಕ್ಕೆ ಚಿಂತನೆ ನಡೆಸುವೆ: ಸಚಿವ ಶ್ರೀರಾಮುಲು

ಬಳ್ಳಾರಿಯ ಸರ್ಕಾರಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರೋಟಾ ವೈರಸ್ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು ಈ ಭರವಸೆ ನೀಡಿದ್ದಾರೆ.

ಈ ಹಿಂದೆ ರಾಜ್ಯದ ತಾಯಂದಿರ ಹಾಗೂ ಮಕ್ಕಳ ಸುರಕ್ಷತೆಗಾಗಿ ಮಡಿಲು ಕಿಟ್ ವಿತರಿಸಲಾಗುತ್ತಿತ್ತು. ಆದ್ರೀಗ ನೀವೆಲ್ಲ ಹೊರಗಡೆ ಖರೀದಿಸಿ ತಂದಿದ್ದೀರಿ. ಇದನ್ನು ನಾನು ಸೂಕ್ಷ್ಮವಾಗಿ ಗಮನಿಸಿರುವೆ ಎಂದು ಮುಂದೆ ಕುಳಿತಿದ್ದ ಬಾಣಂತಿಯರು ಮಕ್ಕಳಿಗೆ ಅಳವಡಿಸಿದ್ದ ಮಡಿಲು ಕಿಟ್ ಅನ್ನು ತೋರಿಸುತ್ತಾ ಭಾವುಕರಾದರು. ಈ ಕುರಿತು ರಾಜ್ಯ ಸರ್ಕಾರದೊಂದಿಗೆ ಚರ್ಚಿಸುವೆ. ಮಡಿಲು ಕಿಟ್ ಯೋಜನೆ ಜಾರಿಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದರು.

ಇನ್ನು, ಉಪಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನದ ಕುರಿತು ಮಾತನಾಡಿದ ಶ್ರೀರಾಮುಲು, ನಾನು ಪಕ್ಷದ ತೀರ್ಮಾನಕ್ಕೆ ಬದ್ಧನಾಗಿ ಕೆಲಸ ಮಾಡುತ್ತಿದ್ದೇನೆ. ಈ ಹಿಂದೆ ನನಗೆ ಆರೋಗ್ಯ ಖಾತೆ ನಿಭಾಯಿಸಿದ ಅನುಭವ ಇದೆ. ಜನರ ಆರೋಗ್ಯದ ವಿಚಾರದಲ್ಲಿ ಕಾಳಜಿವಹಿಸುವ ಕೆಲಸ ಮಾಡುವೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details