ಬಳ್ಳಾರಿ:ಜಿಲ್ಲೆಯ ಹೊಸಪೇಟೆ ತಾಲೂಕಿನ ನಲ್ಲಾಪುರ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಾಲಕ ಗಾದೆಗಳನ್ನು ನಿರರ್ಗಳವಾಗಿ ಹೇಳುವ ಮೂಲಕ ಗಮನ ಸೆಳೆದಿದ್ದಾನೆ.
'ಅ'ದಿಂದ'ಳ' ವರೆಗೆ ನಿರರ್ಗಳವಾಗಿ ಗಾದೆ ಮಾತುಗಳನ್ನು ಹೇಳ್ತಾನೆ ಈ ಪೋರ! - Ballary government school boy
ಗಣಿನಾಡು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ನಲ್ಲಾಪುರ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಾಲಕ ತನ್ನಲ್ಲಿರುವ ವಿಶೇಷ ಪ್ರತಿಭೆಯಿಂದ ಮೆಚ್ಚುಗೆ ಗಳಿಸಿದ್ದಾನೆ.
ಗಾದೆ ಮಾತುಗಳು ಇವನ ನಾಲಿಗೆಯಲ್ಲಿ ಹರಿದಾಡುವುದನ್ನು ಒಮ್ಮೆ ನೋಡಿ....
ನಲ್ಲಾಪುರದ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿ ವ್ಯಾಸಂಗ ಮಾಡುತ್ತಿರುವ ಕೆ. ಎರಿಲಿಂಗ ಗಾದೆಮಾತುಗಳನ್ನು ಅರಳು ಹುರಿದಂತೆ ಪಟಪಟನೆ ಹೇಳಬಲ್ಲ. ಈ ತನ ಪ್ರತಿಭೆ ಮತ್ತು ಆಸಕ್ತಿ ಗುರುತಿಸಿದ ಶಿಕ್ಷಕ ವೈ.ಎಂ.ಡಿ ಸಂತೋಷ್, ಅಕ್ಷರಮಾಲೆಗಳಿಂದ ಗಾದೆ ಮಾತುಗಳನ್ನು ಹೇಳಿಸುವ ಪ್ರಯತ್ನ ಮಾಡಿಸಿದ್ದಾರೆ. ಕನ್ನಡ ವರ್ಣಮಾಲೆ 'ಅ' ಇಂದ 'ಳ' ವರೆಗೆ ಸರಾಗವಾಗಿ ಹೇಳುವ ಗಾದೆ ಮಾತುಗಳನ್ನು ಹೇಳುವ ಬಾಲಕವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.