ಬಳ್ಳಾರಿ: ಲಾಕ್ಡೌನ್ನ್ನು ಸಮರ್ಥವಾಗಿ ಎದುರಿಸೋಕೆ ಜಿಲ್ಲಾಡಳಿತ ನರೇಗಾ ಯೋಜನೆ ಅನುದಾನ ಬಳಕೆಗೆ ಚಿಂತನೆ ನಡೆಸಿದ್ದು, ಈ ಸಂಬಂಧ ಡಿಸಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರ ಸಮಕ್ಷಮದಲಿ ನಡೆದ ಜನಪ್ರತಿನಿಧಿಗಳ ಸಭೆಯಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಲಾಕ್ಡೌನ್ ಎದುರಿಸೋಕೆ ನರೇಗಾ ಯೋಜನೆ ಅನುದಾನ ಬಳಕೆಗೆ ಚಿಂತನೆ
ಕನಿಷ್ಠ ಹದಿನಾಲ್ಕು ಮಾನವ ದಿನಗಳ ಸೃಜನೆ ಮಾಡಿದ ಕುಟುಂಬ ಸದಸ್ಯರಿಗೆ ತಲಾ 3,000 ರೂ.ಗಳ ಹಣವನ್ನ ಆಯಾ ಕುಟುಂಬ ಸದಸ್ಯರ ಖಾತೆಗಳಿಗೆ ಜಮಾವಣೆ ಮಾಡುವ ಜನಪ್ರತಿನಿಧಿಗಳ ಒಕ್ಕೊರಲಿನ ತೀರ್ಮಾನಕ್ಕೆ ಬರಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ತಿಳಿಸಿದ್ದಾರೆ.
ಕನಿಷ್ಠ ಹದಿನಾಲ್ಕು ಮಾನವ ದಿನಗಳ ಸೃಜನೆ ಮಾಡಿದ ಕುಟುಂಬ ಸದಸ್ಯರಿಗೆ ತಲಾ 3,000 ರೂ.ಗಳ ಹಣವನ್ನ ಆಯಾ ಕುಟುಂಬ ಸದಸ್ಯರ ಖಾತೆಗಳಿಗೆ ಜಮಾವಣೆ ಮಾಡುವ ಜನಪ್ರತಿನಿಧಿಗಳ ಒಕ್ಕೊರಲಿನ ತೀರ್ಮಾನಕ್ಕೆ ಬರಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಂದಾಜು 1.60 ಲಕ್ಷ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ಕ್ರಮವಾಗಿ 3,000 ರೂ.ಗಳ ಹಣವನ್ನ ಜಮಾಯಿಸಿದ್ರೆ ಆ ಕುಟುಂಬದವರ ದಿನಸಿ ಖರೀದಿಗೂ ಸಹಾಯವಾಗಲಿದೆಂಬ ಉದ್ದೇಶದೊಂದಿಗೆ ಈ ತೀರ್ಮಾನಕ್ಕೆ ಬರಲಾಗಿದೆ. ಮೊದಲಿಗೆ ಕನಿಷ್ಠ 50 ದಿನಗಳಕಾಲ ಕೆಲಸ ಮಾಡಿರೋ ಕುಟುಂಬಗಳಿಗೆ ನಗದು ಹಣವನ್ನ ಬ್ಯಾಂಕ್ ಖಾತೆಗಳಿಗೆ ಜಮಾವಣೆ ಮಾಡುವ ಅಭಿಪ್ರಾಯವನ್ನು ಜಿಲ್ಲೆಯ ಜನಪ್ರತಿನಿಧಿಗಳಿಂದ ಬಂದಿತ್ತು. ಆ ಪ್ರಮಾಣದಲ್ಲಿ ಕೆಲಸ ಮಾಡಿರುವವರ ಸಂಖ್ಯೆ ಕಮ್ಮಿಯಾಗಿರುತ್ತೆ. ಹೀಗಾಗಿ, 14 ದಿನಗಳಕಾಲ ಕೂಲಿ ಕೆಲಸ ಮಾಡಿರೋ ಕುಟುಂಬಗಳಿಗೆ ನಗದು ಹಣವನ್ನ ಜಮಾಯಿಸುವ ನಿರ್ಧಾರಕ್ಕೆ ಬರಲಾಯಿತು.