ಬಳ್ಳಾರಿ:ಕಳ್ಳತನ ಪ್ರಕರಣದ ಆರೋಪಿಯನ್ನು ಗಾಂಧಿನಗರ ಠಾಣೆಯ ಪೊಲೀಸರು ಬಂಧಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳವು ಆರೋಪಿ ಬಂಧನ: ₹ 2.40 ಲಕ್ಷ ಮೌಲ್ಯದ ಚಿನ್ನಾಭರಣ ವಶ - ಗಾಂಧಿನಗರ ಪೊಲೀಸ್ ತಂಡದಿಂದ ಕಳ್ಳನ ಬಂಧನ
ಗಾಂಧಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಗಾಂಧಿನಗರ ಠಾಣೆಯ ಪೊಲೀಸರು ಬಂಧಿಸಿ ಅಂದಾಜು ₹ 2.40 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
![ಕಳವು ಆರೋಪಿ ಬಂಧನ: ₹ 2.40 ಲಕ್ಷ ಮೌಲ್ಯದ ಚಿನ್ನಾಭರಣ ವಶ](https://etvbharatimages.akamaized.net/etvbharat/prod-images/768-512-5015323-thumbnail-3x2-kljklj.jpg)
ಕಳವು ಆರೋಪಿ ಬಂಧನ: ₹ 2.40ಲಕ್ಷ ಚಿನ್ನಾಭರಣ ವಶ
ಗಾಂಧಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸೋಮಶೇಖರ ಬಂಧಿತ ಆರೋಪಿ. ಇನ್ಸ್ಪೆಕ್ಟರ್ ಆರ್. ಗಾಯತ್ರಿ ನೇತೃತ್ವದ ಗಾಂಧಿನಗರ ಪೊಲೀಸ್ ತಂಡ ಬಳ್ಳಾರಿಯ ಕೆಎಚ್ಬಿ ಕಾಲೊನಿಯಲ್ಲಿ ಕಳ್ಳನನ್ನು ಬಂಧಿಸಿದೆ. ಆರೋಪಿಯಿಂದ ಪೊಲೀಸರು ಅಂದಾಜು ₹ 2.40 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.