ಕರ್ನಾಟಕ

karnataka

ETV Bharat / state

ಹಂಪಿ ಪ್ರವಾಸಿಗರು ಕತ್ತಲಲ್ಲಿ...ಮೂಲಭೂತ ಸೌಲಭ್ಯಗಳಿಂದ ವಂಚಿತ ! - hampi latest news

ವಿಶ್ವ ವಿಖ್ಯಾತ ಹಂಪಿಯಲ್ಲಿ ಇದೀಗ ಸರಿಯಾದ ಮೂಲಭೂತ ವ್ಯವಸ್ಥೆಗಳಿಲ್ಲದೆ ಪ್ರವಾಸಿಗರು ಪರದಾಡುವಂತಾಗಿದೆ.

There is no systematic infrastructure in Hampi
ಐತಿಹಾಸಿಕ ಹಂಪಿ : ಕತ್ತಲಲ್ಲಿ ಪ್ರವಾಸಿಗರು...ಮೂಲಭೂತ ಸೌಲಭ್ಯಗಳಿಂದ ವಂಚಿತ !

By

Published : Dec 15, 2019, 8:04 AM IST

ಹೊಸಪೇಟೆ:ವಿಶ್ವ ವಿಖ್ಯಾತ ಹಂಪಿಯಲ್ಲಿ ಇದೀಗ ಮೂಲಭೂತ ಸೌಲಭ್ಯಗಳಿಲ್ಲದೆ ಪ್ರವಾಸಿಗರು ತೊಂದರೆ ಅನುಭವಿಸುವಂತಾಗಿದೆ.

ಐತಿಹಾಸಿಕ ಹಂಪಿ : ಕತ್ತಲಲ್ಲಿ ಪ್ರವಾಸಿಗರು...ಮೂಲಭೂತ ಸೌಲಭ್ಯಗಳಿಂದ ವಂಚಿತ !

ಹಂಪಿಯಲ್ಲಿ ಪ್ರವಾಸಿಗರ ವಾಹನಗಳ ನಿಲುಗಡೆ ಸ್ಥಳದಲ್ಲಿ ವಿದ್ಯುತ್ ಹಾಗೂ ಕುಡಿಯು ನೀರಿಲ್ಲದೆ ಪರದಾಡುವಂತಾಗಿದೆ. ಪ್ರವಾಸಿಗರು ರಾತ್ರಿ ಸಮಯದಲ್ಲಿ ತಮ್ಮ ವಾಹನದಿಂದ ಒಂದು ಕಿ.ಮೀ ದೂರ ನಡೆದುಕೊಂಡು ಬರುವಂತಾಗಿದ್ದು, ರಸ್ತೆಯ ಪಕ್ಕದಲ್ಲಿರುವ ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ದೀಪಗಳು ಉರಿಯದೇ ಕತ್ತಲ ಕೊಂಪೆಯಾಗಿದೆ. ಪಕ್ಕದಲ್ಲಿ ತುಂಗ ಭದ್ರಾ ನದಿ ಹರಿಯುತ್ತಿದ್ದರೂ ಸಹ ಕುಡಿಯಲು ನೀರಿಲ್ಲ ಎನ್ನುವಂತಾಗಿದೆ.

ಅಷ್ಟೇ ಅಲ್ಲದೇ, ಪ್ರವಾಸಿಗರಿಗೆ ಉಳಿದುಕೊಳ್ಳಲು ವಸತಿ ಗೃಹಗಳಿಲ್ಲ, ಕುಡಿಯಲು ನೀರಿಲ್ಲ , ಮಹಿಳೆಯರಿಗೆ ಮತ್ತು ಮಕ್ಕಳಿಗೆ ಶೌಚಾಲಯಗಳಿಲ್ಲ. ಸ್ವಚ್ಛ ಭಾರತ ಯೋಜನೆ ಜಾರಿಯಾದರೂ ಇಲ್ಲಿ ಮಾತ್ರ ಮಹಿಳೆಯರು ಪರದಾಡುವಂತಾಗಿದೆ ಎಂದು‌ ಪ್ರವಾಸಿಗರು ಈಟಿವಿ ಭಾರತದೊಂದಿಗೆ ಹಂಚಿಕೊಂಡರು.

ABOUT THE AUTHOR

...view details