ಕರ್ನಾಟಕ

karnataka

ETV Bharat / state

ವಿಜಯನಗರ ಜಿಲ್ಲೆ ರಚನೆಯಲ್ಲಿ ಸ್ವಾರ್ಥವಿಲ್ಲ.. ಸಚಿವ ಬಿ ಶ್ರೀರಾಮುಲು ಸ್ಪಷ್ಟನೆ - sriramulu talks about Vijayanagar district formation

ಸರ್ಕಾರದ ಸವಲತ್ತುಗಳು ಜನರಿಗೆ ಸಿಗಬೇಕು ಎಂದು ವಿಜಯನಗರ ಜಿಲ್ಲೆಯನ್ನು ರಚನೆ ಮಾಡಲಾಗಿದೆ..

sriramulu
ಬಿ.ಶ್ರೀರಾಮುಲು

By

Published : Nov 29, 2020, 9:15 PM IST

ಹೊಸಪೇಟೆ :ವಿಜಯನಗರ ಜಿಲ್ಲೆ ರಚನೆಯಲ್ಲಿ ಸ್ವಾರ್ಥವಿಲ್ಲ.‌ ಆಡಳಿತ ದೃಷ್ಟಿಕೋನದಿಂದ ಜಿಲ್ಲೆಯನ್ನು ರಚನೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಬಿ.ಶ್ರೀರಾಮುಲು ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಸವಲತ್ತುಗಳು ಜನರಿಗೆ ಸಿಗಬೇಕು ಎಂದು ವಿಜಯನಗರ ಜಿಲ್ಲೆಯನ್ನು ರಚನೆ ಮಾಡಲಾಗಿದೆ. ಅಖಂಡ ಜಿಲ್ಲೆ ಬಹಳ ದೊಡ್ಡದಾಗಿದೆ. ಹಾಗಾಗಿ, ವಿಜಯನಗರ ಜಿಲ್ಲೆ ರಚನೆ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದರು.

ಸಚಿವ ಬಿ.ಶ್ರೀರಾಮುಲು ಮಾತನಾಡಿದರು

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಅವರು ಸಿಎಂ ಕಾರ್ಯದರ್ಶಿ ಸಂತೋಷ್ ಅವರ ಆತ್ಮಹತ್ಯೆ ಯತ್ನಿಸಿರುವ ಪ್ರಕರಣವನ್ನು ತನಿಖೆ ಮಾಡಲು ಒತ್ತಾಯಿಸಿರುವ ಕುರಿತು ನಾನು ಮಾತನಾಡುವುದಿಲ್ಲ. ಸಂತೋಷ್ ಅವರು ಯಾವ ಕಾರಣಕ್ಕಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೋ ತಿಳಿದಿಲ್ಲ.‌ ಈ ಕುರಿತು ಮಾಹಿತಿ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದರು.

For All Latest Updates

TAGGED:

ABOUT THE AUTHOR

...view details