ಕರ್ನಾಟಕ

karnataka

ETV Bharat / state

ಗವಿಯಪ್ಪ ನನ್ನ ನಡುವೆ ವೈಮನಸ್ಸಿಲ್ಲ: ಆನಂದ ಸಿಂಗ್ ಸ್ಪಷ್ಟನೆ - ರಾಜಕೀಯ ಜೀವನ ಬೇರೆ ವೈಯಕ್ತಿಕ ಜೀವನವೇ ಬೇರೆ

ರಂಗಲೀಲಾ ಕಲ್ಯಾಣ ಮಂಟಪವನ್ನು ಅರಣ್ಯ ಸಚಿವ ಆನಂದ ಸಿಂಗ್ ನಿನ್ನೆ ಉದ್ಘಾಟಿಸಿದರು.

ಆನಂದ ಸಿಂಗ್
ಆನಂದ ಸಿಂಗ್

By

Published : Mar 6, 2020, 3:20 PM IST

ಹೊಸಪೇಟೆ: ಪ್ರಭಾರಿ ಗವಿಯಪ್ಪ ಹಾಗೂ ತಮ್ಮ ನಡುವೆ ಯಾವುದೇ ವೈ ಮನಸ್ಸಿಲ್ಲ ಎಂದು ಅರಣ್ಯ ಸಚಿವ ಆನಂದ ಸಿಂಗ್ ಸ್ಪಷ್ಟ ಪಡಿಸಿದ್ದಾರೆ.

ಹಣಕ್ಕಾಗಿ ರಾಜಕೀಯವನ್ನು ಮಾಡುವಂತಹ ಕುಟುಂಬಗಳಲ್ಲ. ಸಮಾಜ ಸೇವೆಯಲ್ಲಿ ನಿರಂತರವಾಗಿ ಸೇವೆಯನ್ನು ಮಾಡಿಕೊಂಡು ಬಂದಿರುವುದರಿಂದ ಜನ ನಮ್ಮನ್ನು ರಾಜಕೀಯ ಕ್ಷೇತ್ರದಲ್ಲಿ ಸೇವೆಯನ್ನು ಮಾಡಲು ಅವಕಾಶ ನೀಡಿದ್ದಾರೆ. ನಾವು ಪಕ್ಷದ ಸಿದ್ದಾಂತದಂತೆ ಕೆಲಸವನ್ನು ಮಾಡುತ್ತೇವೆ. ಕೆಲ ಜ‌ನರು ಇದನ್ನೇ ಬಂಡವಾಳವಾಗಿಸಿಕೊಂಡು ಹುಳಿ ಹಿಂಡಲು ನೋಡುತ್ತಾರೆ. ಅದಕ್ಕೆ ನಾವು ಅವಕಾಶ ನೀಡುವುದಿಲ್ಲ. ರಾಜಕೀಯ ಜೀವನ ಬೇರೆ ವೈಯಕ್ತಿಕ ಜೀವನವೇ ಬೇರೆ ಎಂದರು.

ಮುಖ್ಯ ಮಂತ್ರಿ ಯಡಿಯೂರಪ್ಪ ಅವರ 78ನೇ ಹುಟ್ಟು ಹಬ್ಬದ ದಿನ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಶುಭಾಶಯಗಳನ್ನು ಕೋರಿ ವೈಯಕ್ತಿಕ ಜೀವನವೇ ಬೇರೆ ರಾಜಕೀಯ ಜೀವನವೆ ಬೇರೆ ಎಂದು ಹೇಳಿದ್ದಾರೆ. ನಾವು ಸಹ ಅಷ್ಟೇ ಗವಿಯಪ್ಪ ಅವರು ನನ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ, ಜನರು ಅವರಿಗೆ ಆರ್ಶಿವಾದವನ್ನು ಮಾಡಲಿಲ್ಲ. ಅವರು ಹಸುವಿನ ಹಾಗೆ ತುಂಬ ಸರಳ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂದರು.

ABOUT THE AUTHOR

...view details