ಹೊಸಪೇಟೆ (ಬಳ್ಳಾರಿ):ಜಿಲ್ಲೆಯ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ರೇಬಿಸ್ ಇಂಜೆಕ್ಷನ್ ಇಲ್ಲ. ರೋಗಿಗಳೇ ಮೆಡಿಕಲ್ನಿಂದ ಇಂಜೆಕ್ಷನ್ ತರುವಂತಹ ಸ್ಥಿತಿಯಿದ್ದು, ಕೂಡಲೇ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ವಕೀಲರಾದ ವಿರೂಪಾಕ್ಷಪ್ಪ ಆಗ್ರಹಿಸಿದ್ದಾರೆ.
ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳೇ ಜೌಷಧ ತರುವಂತಹ ಸ್ಥಿತಿಯಿದೆ: ವಕೀಲ ವಿರೂಪಾಕ್ಷಪ್ಪ ಆರೋಪ - ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ರೇಬಿಸ್ ಇಂಜೆಕ್ಷನ್ ಇಲ್ಲ
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಬಡವರನ್ನು ನಿರ್ಲಕ್ಷಿಸಲಾಗುತ್ತಿದೆ. ಈ ಆಸ್ಪತ್ರೆಯಲ್ಲಿ ರೇಬಿಸ್ ಇಂಜೆಕ್ಷನ್ ಇಲ್ಲ ಎಂದು ವಕೀಲರಾದ ವಿರೂಪಾಕ್ಷಪ್ಪ ಆರೋಪಿಸಿದ್ದಾರೆ.
ವಕೀಲ ವಿರೂಪಾಕ್ಷಪ್ಪ
ಕೂಡ್ಲಿಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಸ್ನೇಹಿತನ ಮಗನಿಗೆ ನಾಯಿ ಕಚ್ಚಿತ್ತು. ಹೀಗಾಗಿ ತಕ್ಷಣ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡ ಹೋಗಲಾಯಿತು. ಹೊರಗಡೆ ಮೆಡಿಕಲ್ನಿಂದ ರೇಬಿಸ್ ಇಂಜೆಕ್ಷನ್ ತರುವಂತೆ ಚೀಟಿ ನೀಡಿದರು.
ರೇಬಿಸ್ ಇಂಜೆಕ್ಷನ್ ಯಾಕಿಲ್ಲ ಅಂತ ಕೇಳಿದರೆ, ಎರಡು ದಿನದ ಹಿಂದೆ ಇಂಜೆಕ್ಷನ್ ಖಾಲಿಯಾಗಿದೆ ಎಂದು ಸುಳ್ಳು ಹೇಳುತ್ತಾರೆ. ಆಸ್ಪತ್ರೆಯಲ್ಲಿ ಬಡವರನ್ನು ನಿರ್ಲಕ್ಷಿಸಲಾಗುತ್ತಿದೆ ಎಂದರು.