ಹೊಸಪೇಟೆ: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಅವರಿಗೆ ನನ್ನ ಕಡೆಯಿಂದ ಸಂಪೂರ್ಣ ಬೆಂಬಲ ಸಿಗುತ್ತದೆ. ನಾನು ಸ್ವತಂತ್ರವಾಗಿ ಮತ ಪ್ರಚಾರವನ್ನು ಮಾಡುತ್ತೇನೆ. ನನಗೆ ಯಾರ ಭಯವು ಇಲ್ಲ ಎಂದು ಮಾಜಿ ಶಾಸಕ ಅನಿಲ್ ಲಾಡ್ ಹೇಳಿದ್ದಾರೆ.
ಹೊಸಪೇಟೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಅವರಿಗೆ ನಾನು ಬೆಂಬಲ ಸೂಚಿಸುತ್ತೇನೆ. ಅವರು ಸರಳ ವ್ಯಕ್ತಿಯಾಗಿದ್ದಾರೆ. ನನಗೆ ಯಾರ ಭಯವು ಇಲ್ಲ. ನಾನು ಮಾತನಾಡುವುದನ್ನು ಪಕ್ಷದ ಹಿರಿಯ ಮುಖಂಡರು ನೋಡುತ್ತಿರುತ್ತಾರೆ ಅವರಿಗೆ ಯಾವುದಾದರು ಖಾತೆಯನ್ನು ನೀಡಬೇಕು ಎಂಬುದು ನನ್ನ ಆಶಯ ಎಂದರು.