ಹೊಸಪೇಟೆ:30 ವರ್ಷದಿಂದ ಪಕ್ಷದ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದೇನೆ. ಇದಾದ ಬಳಿಕ ಮಂತ್ರಿ ಸ್ಥಾನ ದೊರೆತಿದೆ. ಮಂತ್ರಿ ಮಾಡಲು ಯಾರಿಗೂ ಬೇಡಿಕೆ ಇಟ್ಟಿಲ್ಲ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವನಾದ ಬಳಿಕ ಗೋಹತ್ಯೆ ನಿಷೇಧ ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡಲಾಗಿದೆ. ಮಂತ್ರಿಸ್ಥಾನದಿಂದ ಕೈ ಬಿಡುವ ಕುರಿತಂತೆ ಹೈಕಮಾಂಡ್ ಆಗಲಿ, ಮುಖ್ಯಮಂತ್ರಿಗಳಾಗಲಿ ಹಾಗೂ ರಾಜ್ಯಾಧ್ಯಕ್ಷರು ತಿಳಿಸಿಲ್ಲ. ಆದರೆ ಮಾಧ್ಯಮಗಳಲ್ಲಿ ಸಚಿವ ಸ್ಥಾನದಿಂದ ಬಿಡುವ ಕುರಿತು ವರದಿಗಳು ಕೇಳಿ ಬರುತ್ತಿವೆ. ಸಚಿವ ಸ್ಥಾನದಿಂದ ಬಿಡುವುದಿಲ್ಲ ಎಂಬ ನಂಬಿಕೆ ಇದೆ ಎಂದರು.