ಬಳ್ಳಾರಿ: ವಿಮ್ಸ್‌ನಲ್ಲಿ ಫ್ಲೂ ಸ್ಕ್ರಿನಿಂಗ್ ಮಾಡುವ ಕೊಠಡಿಯಲ್ಲಿ ವೈದ್ಯರು, ಸಿಬ್ಬಂದಿಗಳಿಲ್ಲದಿರುವ ದುಸ್ಥಿತಿ ಇದೆ. ಕಳೆದ ರಾತ್ರಿ ಬೆಂಗಳೂರಿನಿಂದ ಬಳ್ಳಾರಿಗೆ ಬಂದ ಕೂಲಿ ಕಾರ್ಮಿಕ ದಂಪತಿ ಫ್ಲೂ ಸ್ಕ್ರಿನಿಂಗ್ ಮಾಡಿಕೊಳ್ಳಲು ಆಸ್ಪತ್ರೆಗೆ ಆಗಮಿಸಿದ್ದರು. ಆದ್ರೆ ಅರ್ಧ ತಾಸುಗಳ ಕಾದರೂ ಫ್ಲೂ ಸ್ಕ್ರಿನಿಂಗ್ ಕೊಠಡಿಯತ್ತ ಸಿಬ್ಬಂದಿ ಸುಳಿಯಲಿಲ್ಲ.
ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಫ್ಲೂ ಸ್ಕ್ರಿನಿಂಗ್ ಕೊಠಡಿಯಲ್ಲಿ ವೈದ್ಯರು, ಸಿಬ್ಬಂದಿಗಳಿಲ್ಲವೇ? - ಶ್ರೀರಾಮಲು ತವರಲ್ಲಿ ಪ್ಲೋ ಸ್ಕ್ರಿನಿಂಗ್ ಮಾಡುವ ಕೊಠಡಿಯಲ್ಲಿ ವೈದ್ಯರ ಕೊರತೆ
ಬೆಂಗಳೂರಿನಿಂದ ಬಳ್ಳಾರಿಗೆ ಬಂದ ಕೂಲಿ ಕಾರ್ಮಿಕ ದಂಪತಿ ಫ್ಲೂ ಸ್ಕ್ರೀನಿಂಗ್ ಮಾಡಿಸಿಕೊಳ್ಳಲು ವಿಮ್ಸ್‌ಗೆ ಆಗಮಿಸಿ ಕಾದು ಸುಸ್ತಾದರು.

ಪ್ಲೋ ಸ್ಕ್ರಿನಿಂಗ್
ವಿಮ್ಸ್ ಆಸ್ಪತ್ರೆಯ ಫ್ಲೂ ಸ್ಕ್ರಿನಿಂಗ್ ಕೊಠಡಿಯಲ್ಲಿ ವೈದ್ಯರು, ಸಿಬ್ಬಂದಿಗಳಿಲ್ಲವೇ?
ಈ ಸಮಯದಲ್ಲಿ ಈಟಿವಿ ಭಾರತದ ಪ್ರತಿನಿಧಿ, ಇಲ್ಲಿ ಏಕೆ ನಿಂತಿದ್ದೀರಿ? ಎಂದು ಪ್ರಶ್ನಿಸಿದರು. ನಾವು ಬಳ್ಳಾರಿಯ ಗಾಧಿಗನೂರಿನಿಂದ ಬಂದಿದ್ದೇವೆ. ಫ್ಲೂ ಸಂಬಂಧ ಸ್ಕ್ರಿನಿಂಗ್ ಮಾಡಿಸಬೇಕಿದೆ. ಆದ್ರೆ ಇಲ್ಲಿ ವೈದ್ಯರು, ಸಿಬ್ಬಂದಿಗಳು ಕಾಣಿಸುತ್ತಿಲ್ಲ ಎಂದು ಅಳಲು ತೋಡಿಕೊಂಡರು.