ಬಳ್ಳಾರಿ: ದಲಿತ ಸಂಘಟನೆಗಳು, ಅಲ್ಪ ಸಂಖ್ಯಾತರು, ಹಿಂದುಳಿದ ವರ್ಗದವರು ಮೈತ್ರಿ ಪಕ್ಷದ ಅಭ್ಯರ್ಥಿ ವಿ.ಎಸ್ ಉಗ್ರಪ್ಪಗೆ ಮತ ನೀಡಿ ಎಂದು ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ವಿಭಾಗಿಯ ಸಂಘಟನ ಸದಸ್ಯ ದುರ್ಗಪ್ಪ ತಳವಾರ ಕರೆ ನೀಡಿದರು.
ದೇಶದ 130 ಕೋಟಿ ಜನರು ಸಹ ಚೌಕಿದಾರರು, ಬರೀ ಮೋದಿ ಮಾತ್ರವಲ್ಲ ನಗರದ ಖಾಸಗಿ ಹೋಟೆಲ್ನಲ್ಲಿ ಈಟಿವಿ ಭಾರತನೊಂದಿಗೆ ಮಾತನಾಡಿದ ಅವರು, ಕಳೆದ ಐದು ವರ್ಷಗಳಿಂದ ನರೇಂದ್ರ ಮೋದಿ ಸರ್ಕಾರ ಪ್ರಜಾತಂತ್ರ ವ್ಯವಸ್ಥೆಯನ್ನು ಗಾಳಿಗೆ ತೂರಿದೆ. ಈ ದೇಶದಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರಿಗೆ, ಅಸುರಕ್ಷಿತ ಎಂಬ ಭಯ ಕಾಡುತ್ತಿದೆ ಎಂದು ಆರೋಪಿಸಿದರು.
ವಿ.ಎಸ್ ಉಗ್ರಪ್ಪ ಒಳ್ಳೆಯ ವಾಗ್ಮಿ, ವಕೀಲರು, ಸಂಸದೀಯ ಪಟುವಾಗಿದ್ದು, ಅವರಿಗೇ ಮತ ನೀಡಬೇಕೆಂದರು. ಸಂವಿಧಾನವನ್ನೇ ಬದಲಾವಣೆ ಮಾಡತ್ತೇವೆ ಎನ್ನುವ ಈ ಬಿಜೆಪಿ ಸರ್ಕಾರಕ್ಕೆ ದಲಿತ ಸಂಘಟನೆಗಳು, ಅಲ್ಪ ಸಂಖ್ಯಾತರ, ಹಿಂದುಳಿದ ವರ್ಗದವರು ಮತ ನೀಡಬೇಡಿ ಎಂದು ದುರ್ಗಪ್ಪ ಹೇಳಿದರು.
ಶಿಕ್ಷಣವಿಲ್ಲದೇ ಸಮಾಜ ಬದಲಾವಣೆ ಸಾಧ್ಯವಿಲ್ಲ. ಆದರೆ ಮೋದಿಯವರು ವಿದ್ಯಾವಂತ ಯುವಕರಿಗೆ ಕೆಲಸ ಕೊಡದೇ ಪಕೋಡ, ಟೀ, ಪೇಪರ್ ಮಾರಿ ಎಂದರೆ ಹೇಗೆ ದಲಿತ ಮುಖಂಡ ಜಿ. ವೆಂಕಟೇಶ್ ಪ್ರಶ್ನಿಸಿದರು.