ಹೊಸಪೇಟೆ (ವಿಜಯನಗರ): ಮದ್ಯ ಖರೀದಿ ನೆಪದಲ್ಲಿ ಅಂಗಡಿಗೆ ಬಂದು ಹಣ ಲಪಟಾಯಿಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹರಪನಹಳ್ಳಿ ಪಟ್ಟಣದ ಆಂಜನೇಯ ಬಡಾವಣೆಯಲ್ಲಿ ಈ ಘಟನೆ ಜರುಗಿದೆ.
VIDEO: ಮದ್ಯ ಕೊಳ್ಳುವ ನೆಪದಲ್ಲಿ ಬಂದು ಹಣ ಕದ್ದು ಎಸ್ಕೇಪ್ - hospet news
ಪಟ್ಟಣದ ಬೈಪಾಸ್ ಬಳಿ ಇದ್ದ ಅಶ್ವಿನಿ ವೈನ್ ಶಾಪ್ ನಲ್ಲಿ ಹಣ ಕಳ್ಳತನ ಮಾಡಲಾಗಿದೆ. ಈ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮದ್ಯ ಕೊಳ್ಳುವ ನೆಪದಲ್ಲಿ ಬಂದು ಹಣ ಕದ್ದು ಎಸ್ಕೇಪ್
ಪಟ್ಟಣದ ಬೈಪಾಸ್ ಬಳಿ ಇದ್ದ ಅಶ್ವಿನಿ ವೈನ್ ಶಾಪ್ ನಲ್ಲಿ 55 ಸಾವಿರ ರೂಪಾಯಿ ಹಣ ಕಳ್ಳತನ ಮಾಡಲಾಗಿದೆ. ಗೀತಾ ಎಂಬುವರಿಗೆ ಸೇರಿದ ಬಾರ್ ಇದಾಗಿದ್ದು, ಕಳ್ಳರು ಹಣ ಲಪಟಾಯಿಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಮದ್ಯ ಕೊಳ್ಳುವ ನೆಪದಲ್ಲಿ ಬಾರ್ಗೆ ಮೂರು ಜನರ ತಂಡ ಬಂದಿದೆ. ಇಬ್ಬರು ಮ್ಯಾನೇಜರ್ ಮತ್ತು ಸಿಬ್ಬಂದಿಯ ಗಮನ ಬೇರೆಡೆ ಸೆಳೆಯುತ್ತಾರೆ. ಮತ್ತೊಬ್ಬ ಟೇಬಲ್ ಮೇಲೆ ಇಟ್ಟಿದ್ದ 55 ಸಾವಿರ ರೂಪಾಯಿ ಹಣ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಹಣ ಕಳುವಾಗಿರೋದು ತಿಳಿದ ತಕ್ಷಣ ಹರಪನಹಳ್ಳಿ ಪೊಲೀಸ್ ಠಾಣೆಗೆ ಬಾರ್ ಮಾಲೀಕ ದೂರು ನೀಡಿದ್ದಾರೆ.
Last Updated : Aug 19, 2021, 10:20 PM IST