ಕರ್ನಾಟಕ

karnataka

ETV Bharat / state

ಸಂಡೇ ಲಾಕ್​ಡೌನ್​​​ ನಡುವೆ ಅದ್ಧೂರಿಯಾಗಿ ನಡೆದ ಮದುವೆ... ಪಾಲನೆ ಆಗದ ಸಾಮಾಜಿಕ ಅಂತರ! - Bellary news 2020

ರಾಜ್ಯಾದ್ಯಂತ ಸಂಡೇ ಲಾಕ್​ಡೌನ್​​ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ನಡುವೆಯೇ ಬಳ್ಳಾರಿಯ ಕಮಲಾಪುರ ಶಾದಿ ಮಹಲ್​​ನಲ್ಲಿ ಅದ್ಧೂರಿಯಾಗಿ ವಿವಾಹ ಕಾರ್ಯಕ್ರಮವೊಂದು ನಡೆದಿದೆ.

The wedding ceremony was held amidst a Sunday lockdown at Ballary
ಸಂಡೇ ಲಾಕ್​ಡೌನ್​ ನಡುವೆ ಅದ್ಧೂರಿಯಾಗಿ ನಡೆದ ಮದುವೆ ಸಮಾರಂಭ

By

Published : Jul 13, 2020, 2:12 PM IST

ಬಳ್ಳಾರಿ: ರಾಜ್ಯಾದ್ಯಂತ ಸಂಡೇ ಲಾಕ್​ಡೌನ್​ ಜಾರಿಯ ನಡುವೆಯೂ ಹೊಸಪೇಟೆ ತಾಲೂಕಿನ ಕಮಲಾಪುರ ಶಾದಿ ಮಹಲ್​​ನಲ್ಲಿ ಅದ್ಧೂರಿಯಾಗಿ ವಿವಾಹ ಮಹೋತ್ಸವ ನೆರವೇರಿಸಲಾಗಿದೆ.

ಮಾಬಾಷಾ ಎಂಬುವವರ ಮದುವೆ ಸಮಾರಂಭಕ್ಕೆ ಸುಮಾರು 200ಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು ಎನ್ನಲಾಗಿದೆ. ಆದರೆ ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಮಾಸ್ಕ್ ಧರಿಸಿದ್ದುದು ಕಂಡು ಬಂತು.

ಮದುವೆ ಸಮಾರಂಭ

ಹೊಸಪೇಟೆ ಹಾಗೂ ಕಮಲಾಪುರದ ಕೆಲ ಮುಖಂಡರು ಸೇರಿದಂತೆ ಇನ್ನಿತರೆ ಗಣ್ಯರು ಈ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿರೋದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಈ ಮದುವೆ ಸಮಾರಂಭಕ್ಕೆ ಪರವಾನಗಿ ಪಡೆದಿದ್ದಾರಾ ಎಂಬ ಮಾಹಿತಿಯನ್ನ ಹೊಸಪೇಟೆ ತಹಶೀಲ್ದಾರ್ ಹೆಚ್.ವಿಶ್ವನಾಥ್ ಅವರಿಗೆ ಕೇಳಿದ್ರೆ,‌ ಅವರು ಮದುವೆ ಸಮಾರಂಭಕ್ಕೆ ಪರವಾನಗಿ ಪಡೆದಿಲ್ಲ. ಆದ್ರೆ ಸಾಮಾಜಿಕ ಅಂತರ ಹಾಗೂ ಮದುವೆ ಸಮಾರಂಭಕ್ಕೆ ಇರಬೇಕಾದ ಸಂಖ್ಯಾ ಬಲ ಇಟ್ಕೊಂಡೇ ಮದುವೆ ಮಾಡಿದ್ದಾರೆ. ‌ಈ ಹಿಂದೆಯೇ ವಿವಾಹ ಸಭಾಂಗಣ ಬುಕ್​ ಮಾಡಲಾಗಿತ್ತು.‌ ಒಳಗಡೆ ಇದ್ದುಕೊಂಡೇ ಮದುವೆ ಮಾಡಿದ್ದಾರೆ. ಅಲ್ಲದೇ ಕೇವಲ ‌50 ಮಂದಿ ಮಾತ್ರ ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details