ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಗಡಿ ಭಾಗದ ರಾರಾವಿಯ ಯಲ್ಲಮನ ಹಳ್ಳದ ನಿರ್ಮಾಣ ಹಂತದ ಸೇತುವೆ ಈಗಾಗಲೇ ಕುಸಿದಿದ್ದು, ತುಂಬಿದ ಹಳ್ಳದ ಸೇತುವೆ ದಾಟಲು ಜನರು ನಿತ್ಯ ಜೀವ ಕೈಯಲ್ಲಿ ಹಿಡಿದು ಸಂಚಾರ ಮಾಡಬೇಕಿದೆ.
ಭಾರೀ ಮಳೆಯಿಂದಾಗಿ ತಾತ್ಕಾಲಿಕ ಸೇತುವೆ ಕುಸಿದ ಪರಿಣಾಮ ಜನರು ಜೀವದ ಹಂಗು ತೊರೆದು ಹಳ್ಳ ದಾಟುವ ಸ್ಥಿತಿ ನಿರ್ಮಾಣವಾಗಿದೆ.
ಜೀವದ ಹಂಗು ತೊರೆದು ಹಳ್ಳ ದಾಟುತ್ತಿರುವ ಜನರು ಜನರು ಕೂಲಿಗೆ ಹೋಗಬೇಕಾದ್ರೆ ನಿತ್ಯ ಇದೇ ಗೋಳು. ಸ್ವಲ್ಪ ಮಳೆ ಬಂದ್ರೆ ಸಾಕು ಜನರ ಗೋಳಾಟ ಮಾತ್ರ ಹೇಳತೀರದು. ಪರ್ಯಾಯ ಮಾರ್ಗದ ಮೂಲಕ ದಡ ಸೇರಬೇಕಾದರೆ 15 ಕಿ.ಮೀಟರ್ ಸುತ್ತುವರೆದು ಹೋಗಬೇಕಿದೆ ಎನ್ನುತ್ತಾರೆ ಗ್ರಾಮಸ್ಥರು.
ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಈಗಲೂ ಇದೇ ಸ್ಥಿತಿ ಇದೆ. ಕೂಡಲೇ ಸಂಬಂಧಿಸಿದ ಅಧಿಕಾರಗಳು, ಶಾಸಕರು ಇತ್ತ ಕಡೆ ಗಮನ ಹರಿಸಿ ತಾತ್ಕಾಲಿಕ ಸೇತುವೆ ಮರು ನಿರ್ಮಾಣ ಮಾಡಬೇಕೆಂದು ರಾರಾವಿ ಗ್ರಾಮದ ಜನರು ಆಗ್ರಹಿಸಿದ್ದಾರೆ.