ಕರ್ನಾಟಕ

karnataka

ETV Bharat / state

ಶಿವಯೋಗಿ ಸಿದ್ದರಾಮೇಶ್ವರ ವಚನಗಳು ಎಲ್ಲರ ಜೀವನಕ್ಕೂ ಅನ್ವಯ : ಅಮರನಾಥ್ - ವಚನಕಾರ ಸಿದ್ದರಾಮೇಶ್ವರ ಅವರ ಭಾವಚಿತ್ರಕ್ಕೆ ಪೂಜೆ

ಶಿವಯೋಗಿ ಸಿದ್ದರಾಮೇಶ್ವರ ಅವರು ಮಹಾಯೋಗಿಗಳು, ಅವರ ವಚನಗಳು ಎಲ್ಲರ ಜೀವನಕ್ಕೆ ಅನ್ವಯವಾಗುತ್ತವೆ. ಅವರ ಮಾರ್ಗದರ್ಶನದಲ್ಲಿ ನಡೆದರೆ ಸುಖ ಶಾಂತಿ ಮತ್ತು ನೆಮ್ಮದಿಯಿಂದ ಜೀವನವನ್ನು ಕಟ್ಟುಕೊಳ್ಳಬಹುದು ಎಂದು ಉಪ ತಹಶಿಲ್ದಾರ್ ಅಮರನಾಥ್ ಹೇಳಿದ್ದಾರೆ.

amarnath
ವಚನಕಾರ ಸಿದ್ದರಾಮೇಶ್ವರ ಅವರ ಭಾವಚಿತ್ರಕ್ಕೆ ಪೂಜೆ

By

Published : Jan 15, 2020, 10:08 AM IST

ಹೊಸಪೇಟೆ:ಶಿವಯೋಗಿ ಸಿದ್ದರಾಮೇಶ್ವರ ಅವರು ಮಹಾಯೋಗಿಗಳು, ಅವರ ವಚನಗಳು ಎಲ್ಲರ ಜೀವನಕ್ಕೆ ಅನ್ವಯವಾಗುತ್ತವೆ. ಅವರ ಮಾರ್ಗದರ್ಶನದಲ್ಲಿ ನಡೆದರೆ ಸುಖ ಶಾಂತಿ ಮತ್ತು ನೆಮ್ಮದಿಯಿಂದ ಜೀವನವನ್ನು ಕಟ್ಟಿಕೊಳ್ಳಬಹುದು ಎಂದು ಉಪ ತಹಶಿಲ್ದಾರ್ ಅಮರನಾಥ್ ಹೇಳಿದ್ದಾರೆ.

ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿ ನಿಮಿತ್ತ ತಾಲೂಕು ಕಚೇರಿಯಲ್ಲಿ ವಚನಕಾರ ಸಿದ್ದರಾಮೇಶ್ವರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ನಗರದಲ್ಲಿ ಇಂದು ತಾಲೂಕು ಆಡಳಿತದಿಂದ ಆಯೋಜಿಸಿದ್ದ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು, ಈ ಕಾರ್ಯಕ್ರಮದಲ್ಲಿ ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಹೂಗಳನ್ನು ಅರ್ಪಿಸಿ ಮಾತನಾಡಿದ ಉಪ ತಹಶಿಲ್ದಾರ್ ಅಮರನಾಥ್, ಅವರ ಆದರ್ಶಗಳು ಕೇವಲ ಸರ್ಕಾರದ ಆಚರಣೆಗಳಾಗಬಾರದು. ಅವರು ಹೇಳಿರುವ ಒಂದೊಂದು ಮಾತು ಜೀವನಕ್ಕೆ ತುಂಬಾ ಹತ್ತಿರವಿದೆ. ಅಂತಹ ವಚನಗಳನ್ನು ನಾಡಿಗೆ ನೀಡಿದ್ದಾರೆ. ಶಿವಯೋಗಿಗಳು ನುಡಿದ ಮಾತುಗಳು ಅವರ ಅನುಭವದ ವಾಕ್ಯಗಳಾಗಿವೆ ಎಂದರು.

ವಚನಗಳ ಕಾಲದಲ್ಲಿನ ನುಡಿ ಮತ್ತುಗಳು ಇಂದಿಗೂ ಜೀವನಕ್ಕೆ ಹತ್ತಿರವಾಗಿವೆ. ಈ ನಾಡಿನಲ್ಲಿ ಮಹಾ ಶರಣರು, ಸಂತರು ಹುಟ್ಟಿ ನಡೆದಾಡುದ ನೆಲ ಎಂದರೆ ಅದು ಕರ್ನಾಟಕಕ್ಕೆ ಹೆಮ್ಮೆಯಾಗುತ್ತದೆ ಎಂದು ತಿಳಿಸಿದರು.

ABOUT THE AUTHOR

...view details