ಕರ್ನಾಟಕ

karnataka

ETV Bharat / state

ಶೀಘ್ರದಲ್ಲೇ ತೆರೆಗೆ ಬರಲಿವೆ ಅಪ್ಪಟ ಗ್ರಾಮೀಣ ಪ್ರತಿಭೆಗಳ ಸಿನಿಮಾ.. ಗಣಿನಾಡಿನಲ್ಲಿ ಸದ್ದಿಲ್ಲದೇ ಚಿತ್ರೀಕರಣ - ಗ್ರಾಮೀಣ ಪ್ರತಿಭೆ ಒಳಗೊಂಡಿರುವ ಸಿನಿಮಾ

ಬಳ್ಳಾರಿ ತಾಲೂಕಿನ ಯಾಳ್ಪಿ ಗ್ರಾಮದ ಹೆಸರಿನಲ್ಲೇ ಸಿನಿಮಾ ಮಾಡಲಾಗಿದೆ. ಲವ್ ಸ್ಟೋರಿ ಆಧರಿತ ಸಿನಿಮಾ ಇದಾಗಿದೆ. ನಾಯಕ ನಟರಾಗಿ ವಿಜಯ ಚಕ್ರವರ್ತಿ ನಟಿಸಿದ್ದಾರೆ. ನಾಯಕ ನಟಿಯನ್ನ ಇನ್ನೂ ಈವರೆಗೂ ಆಯ್ಕೆ ಮಾಡಲಾಗಿಲ್ಲ. ಉಭಯ ಸಿನಿಮಾಗಳು ಅಂದಾಜು 5 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರೋದು ಕೂಡ ವಿಶೇಷ..

ಗಣಿನಾಡಿನಲ್ಲಿ ಸದ್ದಿಲ್ಲದೇ ಚಿತ್ರೀಕರಣ
ಗಣಿನಾಡಿನಲ್ಲಿ ಸದ್ದಿಲ್ಲದೇ ಚಿತ್ರೀಕರಣ

By

Published : Jul 17, 2021, 9:06 PM IST

ಬಳ್ಳಾರಿ :ಗಣಿನಾಡು ಬಳ್ಳಾರಿ ಜಿಲ್ಲೆಯಿಂದಲೇ ಎರಡು ಸಿನಿಮಾಗಳು ರೆಡಿಯಾಗುತ್ತಿವೆ. ಕಳೆದ ಎರಡು ವರ್ಷಗಳಿಂದಲೂ ಈ ಸಿನಿಮಾಗಳ ಶೂಟಿಂಗ್ ಸದ್ದಿಲ್ಲದೇ ನಡೆಯುತ್ತಿದೆ. ಈಗಾಗಲೇ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲುಪಿವೆ. ಅತೀ ಶೀಘ್ರವೇ ಈ ಸಿನಿಮಾಗಳು ಒಂಬತ್ತು ಭಾಷೆಯಲ್ಲಿ ತೆರೆ ಕಾಣಲಿವೆಯಂತೆ.

ಶೀಘ್ರದಲ್ಲೇ ತೆರೆಗೆ ಬರಲಿವೆ ಅಪ್ಪಟ ಗ್ರಾಮೀಣ ಪ್ರತಿಭೆಗಳ ಸಿನಿಮಾ

ಬಳ್ಳಾರಿ ತಾಲೂಕಿನ ಯಾಳ್ಪಿ ಗ್ರಾಮದ ಎಂ ಎಂ ಓಬಳೇಶ ಅವರ ಸಾರಥ್ಯದಲ್ಲಿ ಈ ಎರಡು ಸಿನಿಮಾಗಳು ಶೂಟಿಂಗ್ ನಡೆಯುತ್ತಿವೆ. ಬಹುತೇಕ ಬಳ್ಳಾರಿ ಜಿಲ್ಲೆಯ ಸ್ಥಳೀಯ ರಂಗ ಭೂಮಿ ಕಲಾವಿದರು, ಸಿನಿಮಾ ಮಂದಿರಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರೂ ಸೇರಿದಂತೆ ಅಪ್ಟಟ ಗ್ರಾಮೀಣ ಪ್ರತಿಭೆಗಳೇ ಈ ಸಿನಿಮಾಗಳಲ್ಲಿ ಸಹ ನಟರಾಗಿ ನಟಿಸಿದ್ದಾರೆ.

ಯೋಗ ನರಸಿಂಹ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ 'ಗರುಡ ವ್ಯೂಹ', ನಕ್ಷತ್ರ ಎಂಟರ್ಟೈನ್​ಮೆಂಟ್ ಬ್ಯಾನರ್ ಅಡಿಯಲ್ಲಿ 'ಯಾಳ್ಪಿ' ಎಂಬ ಸಿನಿಮಾಗಳ ಚಿತ್ರೀಕರಣ ನಡೆದಿವೆ. ಗರುಡ ವ್ಯೂಹ ಸಿನಿಮಾವು ಅಂದಾಜು ಒಂಬತ್ತು ಭಾಷೆಗಳಲ್ಲಿ ತೆರೆ ಕಾಣಲಿದೆ.

ಸುಮಾರು 3 ಗಂಟೆ ಸಿನಿಮಾ ಇದಾಗಿದೆ. ಈ ಸಿನಿಮಾದ ನಾಯಕ ನಟರಾಗಿ ಬಳ್ಳಾರಿ ಮೂಲದ ರಘುನಂದನ, ನಾಯಕ ನಟಿಯಾಗಿ ಹೈದರಾಬಾದ್ ಮೂಲದ ಪಾವನಿ ನಾಗರ್ಜುನ ಅವರು ನಟಿಸಿದ್ದಾರೆ.

'ಗರುಡ ವ್ಯೂಹ' ಮತ್ತು 'ಯಾಳ್ಪಿ' ಸಿನಿಮಾವನ್ನು ನಿರ್ದೇಶಕ ಓಬಳೇಶ ಅವರೇ ನಿರ್ದೇಶಿಸುತ್ತಿದ್ದು, ಈ ಮೊದಲು ಕಾಲವೆ ಮೋಸಗಾರ, ಬಳ್ಳಾರಿ ದರ್ಬಾರ್, ತೆಲುಗು ಚಾರಿತೋ ಪೂರಿ ಸಿನಿಮಾದಲ್ಲಿ ಡೈಲಾಗ್ ರೈಟರ್,‌ ಪವನ ಕಲ್ಯಾಣ ಸ್ಥಾಪಿತ ಜನಸೈನ್ಯ ಪಾರ್ಟಿ ಚಿತ್ರಕ್ಕೆ ಹಾಡು ಬರೆದಿದ್ದಾರೆ.

ಬಳ್ಳಾರಿ ತಾಲೂಕಿನ ಯಾಳ್ಪಿ ಗ್ರಾಮದ ಹೆಸರಿನಲ್ಲೇ ಸಿನಿಮಾ ಮಾಡಲಾಗಿದೆ. ಲವ್ ಸ್ಟೋರಿ ಆಧರಿತ ಸಿನಿಮಾ ಇದಾಗಿದೆ. ನಾಯಕ ನಟರಾಗಿ ವಿಜಯ ಚಕ್ರವರ್ತಿ ನಟಿಸಿದ್ದಾರೆ. ನಾಯಕ ನಟಿಯನ್ನ ಇನ್ನೂ ಈವರೆಗೂ ಆಯ್ಕೆ ಮಾಡಲಾಗಿಲ್ಲ. ಉಭಯ ಸಿನಿಮಾಗಳು ಅಂದಾಜು 5 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರೋದು ಕೂಡ ವಿಶೇಷ.

ಗರುಡ ವ್ಯೂಹ ಸಿನಿಮಾವು ಬಳ್ಳಾರಿ ತಾಲೂಕಿನ ರೂಪನಗುಡಿ ಅರಣ್ಯ ಪ್ರದೇಶ, ಸಂಡೂರು, ಬಳ್ಳಾರಿ ನಗರದ ರಾಘವೇಂದ್ರ ಕಾಲೋನಿ, ಕೊಳಗಲ್ಲು, ಸಂಗನಕಲ್ಲು ರಸ್ತೆ, ಕಮ್ಮರಚೇಡು ರಸ್ತೆ, ದಾಂಡೇಲಿಯಲ್ಲಿ ಸಿನಿಮಾ ಶೂಟಿಂಗ್ ನಡೆದಿದೆ‌. ಯಾಳ್ಪಿ ಸಿನಿಮಾವು ವಿಘ್ನೇಶ್ವರ ಕ್ಯಾಂಪ್, ಬಳ್ಳಾರಿ ವಿಮ್ಸ್ ಕಾಲೇಜು ಆವರಣದಲ್ಲಿ ಶೂಟಿಂಗ್ ನಡೆದಿದೆ.

ABOUT THE AUTHOR

...view details