ಬಳ್ಳಾರಿ:ಲಾಕ್ಡೌನ್ನಿಂದಾಗಿ ಸರಣಿ ರಜೆ ಇದ್ದ ಕಾರಣ ಇಲ್ಲಿನ ತುಂಗಾಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಮೂವರು ಕಾರ್ಮಿಕರು ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ಬಳ್ಳಾರಿ: ತುಂಗಭದ್ರಾ ನದಿಗೆ ಈಜಲು ಹೋಗಿದ್ದ ಮೂವರು ಕಾರ್ಮಿಕರು ನೀರುಪಾಲು - ತುಂಗಾಭದ್ರಾ ನದಿ
ಇಲ್ಲಿನ ತುಂಗಾಭದ್ರಾ ನದಿಯಲ್ಲಿ ಈಜಲು ತರೆಳಿದ್ದ ಸೋವೇನಹಳ್ಳಿ ಗ್ರಾಮದ ನಿವಾಸಿ ಕೋಗಳಿ ಮಾರುತಿ (23), ಮಲ್ಲಿನಕೆರೆ ಸುರೇಶ (25) ಹಾಗೂ ಹಂಪಸಾಗರ ಗ್ರಾಮದ ಪಿ.ಫಕರುದ್ದೀನ್ (25) ಎಂಬುವರು ನೀರುಪಾಲಾಗಿದ್ದಾರೆ.

ಜಿಲ್ಲೆಯ ಹಡಗಲಿ ತಾಲೂಕಿನ ಸೋವೇನಹಳ್ಳಿ ಗ್ರಾಮದ ಮಾರ್ಗವಾಗಿ ಹರಿಯುವ ತುಂಗಭದ್ರಾ ನದಿಯಲ್ಲಿ ಈಜಾಡಲು ಐದು ಮಂದಿ ತೆರಳಿದ್ದು, ಆ ಪೈಕಿ ಮೂವರು ನೀರುಪಾಲಾದ್ರೆ, ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸೋವೇನಹಳ್ಳಿ ಗ್ರಾಮದ ನಿವಾಸಿ ಕೋಗಳಿ ಮಾರುತಿ (23), ಮಲ್ಲಿನಕೆರೆ ಸುರೇಶ (25) ಹಾಗೂ ಹಂಪಸಾಗರ ಗ್ರಾಮದ ಪಿ.ಫಕರುದ್ದೀನ್ (25) ಎಂಬುವರು ನೀರುಪಾಲಾದವರೆಂದು ಗುರುತಿಸಲಾಗಿದೆ. ಮಲ್ಲಿನಕೆರೆ ಸುರೇಶ ಎಂಬಾತ ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿ ದಿನಗೂಲಿ ನೌಕರರಾಗಿದ್ದ ಎನ್ನಲಾಗಿದೆ. ಉಳಿದ ಇಬ್ಬರು ಕೂಲಿ ಕಾರ್ಮಿಕರಾಗಿದ್ದಾರೆ. ನೀರುಪಾಲಾದ ಮೃತದೇಹಗಳ ಪತ್ತೆಗೆ ಹಡಗಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಈ ಕುರಿತು ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.