ಕರ್ನಾಟಕ

karnataka

ETV Bharat / state

ಕ್ರೀಡಾಂಗಣದ ಸಜ್ಜಾ ಕುಸಿದು ಇಬ್ಬರು ಸಾವು... ಸಿರುಗುಪ್ಪದಲ್ಲಿ ದುರ್ಘಟನೆ - ಬಳ್ಳಾರಿ ಸುದ್ದಿ

ಕ್ರೀಡಾಕೂಟ ನೋಡಲು ಬಂದಿದ್ದ ವ್ಯಕ್ತಿಯ ಮೇಲೆ ಕ್ರೀಡಾಂಗಣದ ಸಜ್ಜಾ ಕುಸಿದಿದೆ. ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಸಿರಗುಪ್ಪ ಪಟ್ಟಣದಲ್ಲಿ ನಡೆದಿದೆ.

ಕ್ರೀಡಾಂಗಣದ ಸಜ್ಜಾ ಕುಸಿದು ಪ್ರೇಕ್ಷಕ ಸಾವು

By

Published : Aug 23, 2019, 4:29 PM IST

Updated : Aug 23, 2019, 5:25 PM IST

ಬಳ್ಳಾರಿ:ಕ್ರೀಡಾಕೂಟ ನೋಡಲು ಬಂದಿದ್ದ ಪ್ರೇಕ್ಷಕರ ಮೇಲೆ ಕ್ರೀಡಾಂಗಣದ ಸಜ್ಜಾ ಕುಸಿದಿದೆ. ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿ ನಡೆದಿದೆ.

ಕ್ರೀಡಾಂಗಣದ ಸಜ್ಜಾ ಕುಸಿದು ಇಬ್ಬರು ಸಾವು

ಈ ಘಟನೆಯಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದರೆ, ಹತ್ತು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹಚ್ಚೊಳ್ಳಿಯಲ್ಲಿ ವಲಯ ಮಟ್ಟದ ಕ್ರೀಡಾಕೂಟ ನಡೆದಿತ್ತು. ಕಟ್ಟಡದ ಮೇಲೆ ಕುಳಿತು‌ ಜನ‌ ಕ್ರೀಡೆ ವೀಕ್ಷಿಸುತ್ತಿರುವಾಗ ಈ ಅವಘಡ ಸಂಭವಿಸಿದೆ.

ಮೃತರಲ್ಲಿ ಒಬ್ಬರನ್ನು ಶಿವು ಎಂದು ಗುರುತಿಸಲಾಗಿದೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ‌ ಕೆಲವರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಜನರ ಕಿರುಚಾಟದಿಂದ ಸಜ್ಜಾ ಕುಸಿದ ಮೇಲೆ ಕೆಲ ಹೊತ್ತು ಏನು‌ ನಡೆಯುತ್ತಿದೆ ಎಂಬುದು ಅರಿಯದಂತಾಗಿತ್ತು. ಸ್ಥಳದಲ್ಲಿದಲ್ಲಿದ್ದ ಇತರೆ ಜನ, ಕ್ರೀಡಾಪಟುಗಳು ಗಾಯಾಳುಗಳನ್ನು ಕಟ್ಟಡದ ಅವಶೇಷಗಳಿಂದ ರಕ್ಷಣೆ ಮಾಡಿದ್ದಾರೆ.

Last Updated : Aug 23, 2019, 5:25 PM IST

ABOUT THE AUTHOR

...view details