ಹೊಸಪೇಟೆ: ತಾಲೂಕಿನ ವಿವಿಧ ಕಡೆಗಳಲ್ಲಿ ನಿನ್ನೆ ಸಂಜೆ ಭಾರಿ ಗಾಳಿ ಬೀಸಿದ್ದರಿಂದ ಮರಿಯಮ್ಮನಹಳ್ಳಿಯಲ್ಲಿ ಆಶ್ರಯ ಮನೆಯೊಂದರ ಮೇಲ್ಛಾವಣಿ ಸೀಟ್ ಹಾರಿ ಹೋಗಿದ್ದು, ಮನೆಯಲ್ಲಿರುವ ಅಡುಗೆ ಸಾಮಗ್ರಿಗಳೆಲ್ಲಾ ಹಾಳಾಗಿವೆ.
ಮರಿಯಮ್ಮನಹಳ್ಳಿಯಲ್ಲಿ ಬಿರುಗಾಳಿಗೆ ಹಾರಿ ಹೋದ ಮನೆಯ ಮೇಲ್ಛಾವಣಿ
ಏಕಾಏಕಿಯಾಗಿ ಬಿರುಗಾಳಿ ಬೀಸಿದ್ದರಿಂದ ಮರಿಯಮ್ಮನಹಳ್ಳಿಯ 7ನೇ ವಾರ್ಡ್ನಲ್ಲಿರುವ ಆಶ್ರಯ ಮನೆಯ ಮೇಲ್ಛಾವಣಿ ಸಂಪೂರ್ಣವಾಗಿ ಬಿರುಗಾಳಿಗೆ ಹಾರಿಹೋಗಿದೆ.
ಮನೆಯ ಮೇಲ್ಛಾವಣಿ ಕುಸಿತ
ತಾಲೂಕಿನ ಮರಿಯಮ್ಮನಹಳ್ಳಿಯ 7ನೇ ವಾರ್ಡ್ನಲ್ಲಿರುವ ಮ್ಯಾದರಹಳ್ಳಿ ರಾಮಣ್ಣ ಎಂಬುವರ ಆಶ್ರಯ ಮನೆಯ ಮೇಲ್ಛಾವಣಿ ಸಂಪೂರ್ಣವಾಗಿ ಬಿರುಗಾಳಿಗೆ ಕಿತ್ತೋಗಿದೆ. ಬಿರುಗಾಳಿ ಬೀಸಿದಾಗ ಮನೆಯಲ್ಲಿ ಮಕ್ಕಳು ಮತ್ತು ಗರ್ಭಿಣಿ ಮನೆಯಲ್ಲಿದ್ದರು.
ಏಕಾಏಕಿಯಾಗಿ ಬಿರುಗಾಳಿ ಬೀಸಿದ್ದರಿಂದ ಅಡುಗೆ ಮನೆಯ ಸೀಟ್‌ಗಳು ಸಂಪೂರ್ಣವಾಗಿ ಗಾಳಿಯ ರಭಸಕ್ಕೆ ಮುರಿದು ತುಂಡಾಗಿ ಮನೆಯೊಳೆಗೆ ಬಿದ್ದಿವೆ. ಮನೆಯಲ್ಲಿದ್ದ ಗರ್ಭಿಣಿಯು ತನ್ನ ಮಕ್ಕಳನ್ನು ಕರೆದುಕೊಂಡು ಹೊರ ಬಂದಿರುವುದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
Last Updated : Apr 19, 2020, 10:21 AM IST