ಹೊಸಪೇಟೆ:ನಗರದ ತುಂಗಭದ್ರಾ ಜಲಾಶಯ ಕಚೇರಿಯಲ್ಲಿ ಇಂಜಿನಿಯರ್ಸ್ ದಿನಾಚರಣೆಯನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ತುಂಗಭದ್ರಾ ಜಲಾಶಯ ನಿರ್ಮಾಣದ ಇಂಜಿನಿಯರ್ ತಿರುಮಲೇ ಐಯ್ಯಂಗಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಹೊಸಪೇಟೆ: ತುಂಗಭದ್ರಾ ಜಲಾಶಯ ಕಚೇರಿಯಲ್ಲಿ ಇಂಜಿನಿಯರ್ಸ್ ದಿನ ಆಚರಣೆ - ಜಲಾಶಯ ಕಚೇರಿಯಲ್ಲಿ ಇಂಜಿನಿಯರ್ಸ್ ದಿನ ಆಚರಣೆ
ತುಂಗಭದ್ರಾ ಜಲಾಶಯ ಕಚೇರಿಯಲ್ಲಿ ಇಂಜಿನಿಯರ್ಸ್ ದಿನಾಚರಣೆಯನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ತುಂಗಭದ್ರಾ ಜಲಾಶಯ ನಿರ್ಮಾಣದ ಇಂಜಿನಿಯರ್ ತಿರುಮಲೇ ಐಯ್ಯಂಗಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಇಂಜಿನಿಯರ್ಸ್ ದಿನ ಆಚರಣೆ
ತುಂಗಭದ್ರಾ ಜಲಾಶಯದ ಕಾರ್ಯದರ್ಶಿ ಜಿ.ನಾಗಮೋಹನ ಅವರು ಮಾತನಾಡಿ, ರಾಷ್ಟ್ರ ನಿರ್ಮಾಣದಲ್ಲಿ ಇಂಜಿನಿಯರ್ಗಳ ಪಾತ್ರ ಹಿರಿದಾಗಿದೆ. ಜಲಾಶಯ ನಿರ್ಮಾಣ ಕಾರ್ಯದಿಂದ ಲಕ್ಷಾಂತರ ಎಕರೆಗಳಿಗೆ ನೀರುಣಿಸುವ ಸೌಭಾಗ್ಯ ಲಭಿಸಿದೆ. ಮಹಾನ್ ವ್ಯಕ್ತಿಗಳಂತೆ ಯುವ ಜನಾಂಗ ಸಮೃದ್ಧ ರಾಷ್ಟ್ರ ನಿರ್ಮಿಸುವಲ್ಲಿ ಮುಂದಾಗಬೇಕು ಎಂದು ಹೇಳಿದರು. ಅಧೀಕ್ಷಕ ಇಂಜಿನಿಯರ್ ವೆಂಕಟರಮಣ, ಕಾರ್ಯನಿರ್ವಾಹಕ ಇಂಜಿನಿಯರ್ ಮಧುಸೂದನ್ ಇನ್ನಿತರರಿದ್ದರು.