ಕರ್ನಾಟಕ

karnataka

ETV Bharat / state

ಉಕ್ಕಿ ಹರಿಯುತ್ತಿರುವ ತುಂಗಭದ್ರ ನದಿ... ಮುಳುಗಿದ ರಾಮ-ಲಕ್ಷ್ಮಣ ಮಂಟಪ! - ತುಂಗಭದ್ರಾ ಜಾಲಾಶಯ

ತುಂಗಭದ್ರಾ ಜಾಲಾಶಯದ ಹೆಚ್ಚುವರಿ ನೀರನ್ನು ನದಿಗೆ ಹೊರ ಬಿಟ್ಟ ಪರಿಣಾಮ ನದಿಯ ತಟದಲ್ಲಿರುವ ರಾಮ-ಲಕ್ಷ್ಮಣ ಮಂಟಪಗಳು ಮುಳುಗಿವೆ.

ರಾಮ-ಲಕ್ಷ್ಮಣ ಮಂಟಪ

By

Published : Oct 22, 2019, 5:42 PM IST

ಹೊಸಪೇಟೆ:ಗತವೈಭವ ಸಾರುವ ವಿಜಯ ನಗರ ಸಾಮ್ರಾಜ್ಯದ ಪ್ರಾವಾಸಿ ತಾಣಗಳು ತುಂಗಭದ್ರ ನದಿ ನೀರಿನಲ್ಲಿ ಮುಳುಗಿ ಹೋಗಿವೆ.

ತುಂಗಭದ್ರ ನದಿ ನೀರಲ್ಲಿ ಮುಳುಗಿದ ರಾಮ-ಲಕ್ಷ್ಮಣ ಮಂಟಪ

ಹೊಸಪೇಟೆ ಸುತ್ತಮುತ್ತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ತುಂಗಭದ್ರಾ ಜಾಲಾಶಯ ತುಂಬಿದ್ದು, ಹೆಚ್ಚುವರಿ ನೀರನ್ನು ನದಿಗೆ ಬಿಟ್ಟ ಪರಿಣಾಮ‌ ನದಿಯ ತಟದಲ್ಲಿರುವ ರಾಮ-ಲಕ್ಷ್ಮಣ ಮಂಟಪಗಳು ಹಾಗೂ ಮಂದಿರಗಳು ನೀರಿನಲ್ಲಿ ಮುಳುಗಿವೆ.

ಮಳೆಯಿಲ್ಲದೇ ಸುಮಾರು ವರ್ಷಗಳಿಂದ ನದಿ ತುಂಬಿರಲಿಲ್ಲ. ಆದರೆ ಈ ವರ್ಷ ರಾಜ್ಯದಲ್ಲಿ ಸಂಪೂರ್ಣವಾಗಿ ಮಳೆಯಾಗಿರುವುದರಿಂದ ಹಳ್ಳ-ಕೊಳ್ಳಗಳು, ಕೆರೆ, ಜಲಾಶಯಗಳು ತುಂಬಿ ಹರಿಯುತ್ತಿವೆ.

ಮಳೆಯಿಂದಾಗಿ ತುಂಗಭದ್ರಾ ಜಲಾಶಯದ ಹೊಳಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಹಂಪಿಗೆ ಬಂದ ಪ್ರವಾಸಿಗರು ಪ್ರೇಕ್ಷಣೀಯ ಸ್ಥಳಗಳನ್ನು ನೋಡಲಾಗದೆ ಬೇಸರದಿಂದ ಹಿಂತಿರುಗುತ್ತಿದ್ದಾರೆ.

ABOUT THE AUTHOR

...view details