ಕರ್ನಾಟಕ

karnataka

ETV Bharat / state

ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ಐಸೋಲೇಷನ್ ಸ್ಥಾಪನೆಗೆ ಗಣಿನಗರಿಯ ಜನರ ಅಪಸ್ವರ.. - Chairman Mundiyar Memorial Hospital

ಈ ಜಿಲ್ಲಾಸ್ಪತ್ರೆ ಅತೀ ಹೆಚ್ಚು ಜನಸಂದಣಿ ಇರುವ ಪ್ರದೇಶದಲ್ಲಿದೆ. ಅತ್ಯುತ್ತಮ ಸೇವೆಗೆ ಹೆಸರುವಾಸಿಯಾಗಿದ್ದ ಈ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ವೈರಸ್ ಸೋಂಕಿತರನ್ನ ಇಟ್ಟಿರೋದು ನಿಜಕ್ಕೂ ಖೇದಕರ ಸಂಗತಿ ಎಂಬ ಮಾತು ಕೇಳಿ ಬರುತ್ತಿವೆ.

The people oppose establishment of Kovid 19 isolation in the district!
ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಐಶೋಲೇಷನ್ ಸ್ಥಾಪನೆಗೆ ಗಣಿನಗರಿಯ ಜನರ ಅಪಸ್ವರ!

By

Published : Apr 2, 2020, 12:16 PM IST

ಬಳ್ಳಾರಿ: ಇಲ್ಲಿನ ಇಂದಿರಾ ವೃತ್ತದ ಬಳಿಯಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್-19 ಐಶೋಲೇಷನ್ ಸ್ಥಾಪನೆಗೆ ಗಣಿನಗರಿಯ ಜನ ಅಪಸ್ವರ ಎತ್ತಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಐಶೋಲೇಷನ್ ಸ್ಥಾಪನೆಗೆ ಗಣಿನಗರಿಯ ಜನರ ಅಪಸ್ವರ!

ಸಭಾಪತಿ ಮೊದಲಿಯಾರ್ ಸ್ಮರಣಾರ್ಥ ಈ ಜಿಲ್ಲಾಸ್ಪತ್ರೆಯನ್ನ ನಿರ್ಮಿಸಲಾಗಿದೆ. ಮಹಿಳೆಯರ ಹಾಗೂ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಈ ಆಸ್ಪತ್ರೆಯನ್ನ ನಿರ್ಮಿಸಲಾಗಿದೆ. ಕಳೆದ‌ ಮೂರ್ನಾಲ್ಕು ವರ್ಷಗಳಿಂದ ಉತ್ತಮ ಸೇವೆ ನೀಡುತ್ತಾ ಬಂದಿದೆ. ಆದರೆ, ಈ ಆಸ್ಪತ್ರೆಯೊಳಗೆ ಕೋವಿಡ್-19 ಐಸೋಲೇಷನ್ ಸ್ಥಾಪನೆ ಮಾಡಬಾರದಿತ್ತು.‌ ಮೇಲಾಗಿ ಬಳ್ಳಾರಿ ನಗರದ ಹೃದಯ ಭಾಗದಲ್ಲಿ ಈ ಜಿಲ್ಲಾಸ್ಪತ್ರೆ ಇದೆಯಾದ್ರೂ ಅತೀ ಹೆಚ್ಚು ಜನಸಂದಣಿ ಇರುವ ಪ್ರದೇಶವಾಗಿದೆ. ಅತ್ಯುತ್ತಮ ಸೇವೆಗೆ ಹೆಸರುವಾಸಿಯಾಗಿದ್ದ ಈ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ವೈರಸ್ ಸೋಂಕಿತರನ್ನ ಇಟ್ಟಿರೋದು ನಿಜಕ್ಕೂ ಖೇದಕರ ಸಂಗತಿ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಮೊನ್ನೆತಾನೇ ಬಳ್ಳಾರಿ ನಗರ ಶಾಸಕ ಗಾಲಿ‌ ಸೋಮಶೇಖರರೆಡ್ಡಿಯವರು ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ಐಸೋಲೇಷನ್ ಸ್ಥಾಪನೆಗೆ ಆಕ್ಷೇಪಿಸಿದ್ದರು.‌ ಈಗ ಗಣಿನಗರಿಯ ಜನರೂ ಕೂಡ ಇದರ ವಿರುದ್ಧ ಧ್ವನಿ ಎತ್ತಿದ್ದಾರೆ.

ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಅಖಿಲ ಭಾರತ ಜನಗಣ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಎನ್.ಗಂಗಿರೆಡ್ಡಿ ಅವರು, ನಗರದ ಹೃದಯ ಭಾಗದಲ್ಲಿರೋ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ಐಸೋಲೇಷನ್ ಸ್ಥಾಪಿಸಿರೋದು ನಮಗೆ ಆತಂಕಕಾರಿ ಬೆಳವಣಿಗೆ. ಕೇವಲ ಎರಡು ಮೂರು ಪಾಸಿಟಿವ್ ಪ್ರಕರಣಗಳಿಗೋಸ್ಕರ ಇಡೀ ಜಿಲ್ಲಾಸ್ಪತ್ರೆ ಹೆಸರನ್ನೇ ಕೆಡಿಸಲು ಜನಪ್ರತಿನಿಧಿಗಳು ಮುಂದಾಗಿದ್ದಾರೆ. ಈ ಜಿಲ್ಲಾಸ್ಪತ್ರೆ ಚೇತರಿಸಿಕೊಳ್ಳಲು ಮತ್ತೆ ಮುಂದಿನ 20 ವರ್ಷಗಳ ಕಾಲಾವಕಾಶ ಬೇಕಾಗುತ್ತದೆ.‌ ಜಿಲ್ಲೆಯ ಐಎಎಸ್‌ ಅಧಿಕಾರಿಗಳು ಗಮನಹರಿಸಿ ಐಸೋಲೇಷನ್ ಸ್ಥಾಪನೆ ಕುರಿತು ಚರ್ಚಿಸಿ ಬಳಿಕ ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದಿತ್ತು.‌ ಆದರೆ, ಎಕಾಏಕಿ ಇಂತಹ ನಿರ್ಧಾರ ತೆಗೆದುಕೊಂಡಿರೋದು ತರವಲ್ಲ ಎಂದು ಜಿಲ್ಲೆಯ ಸಚಿವರನ್ನ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.

ABOUT THE AUTHOR

...view details