ಬಳ್ಳಾರಿ:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಾದರಾಯನಪುರದಲ್ಲಿ ಭಾನುವಾರ ಹಲ್ಲೆ ಪ್ರಕರಣ ಹೇಯ ಸಂಗತಿ ಎಂದು ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅಭಿಪ್ರಾಯಪಟ್ಟರು.
ಪಾದರಾಯನಪುರ ಘಟನೆ ಅತ್ಯಂತ ಹೇಯ ಕೃತ್ಯ: ಶಾಸಕ ಸೋಮಶೇಖರ ರೆಡ್ಡಿ - Padarayanapura incident
ಪಾದರಾಯನಪುರದಲ್ಲಿ ಭಾನುವಾರ ನಡೆದ ಹಲ್ಲೆ ಪ್ರಕರಣ ಅತ್ಯಂತ ಹೇಯಕರ ಸಂಗತಿಯಾಗಿದೆ. ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಶಾಸಕ ಗಾಲಿ ಸೋಮಶೇಖರ ರೆಡ್ಡಿಯವರು ಆಗ್ರಹಿಸಿದರು.
ಜಿಲ್ಲೆಯ ಎಸ್ಪಿ ವೃತ್ತದ ಬಳಿಯಿರುವ ಮಾರುತಿ ಕಾಲೋನಿಯಲ್ಲಿಂದು ಬಡ ಹಾಗೂ ನಿರ್ಗತಿಕರಿಗೆ ರೇಷನ್ ಕಿಟ್ ವಿತರಿಸುವ ಕಾರ್ಯಕ್ರಮಕ್ಕೂ ಮುನ್ನ ಶಾಸಕ ರೆಡ್ಡಿಯವರು ಸುದ್ದಿಗಾರರೊಂದಿಗೆ ಮಾತನಾಡಿ, ನಿಮ್ಮ ಆರೋಗ್ಯ ರಕ್ಷಣೆ ಮಾಡಲು ಪ್ರಾಣದ ಹಂಗನ್ನೇ ತೊರೆದ ಆಶಾ ಕಾರ್ಯಕರ್ತೆಯರ ಮೇಲೆಯೇ ಹಲ್ಲೆ ನಡೆಸೋದು ಎಷ್ಟು ಸರಿ. ಇದನ್ನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಜರುಗಿಸಬೇಕೆಂದರು.
ಇನ್ನು ಕೊರೊನಾ ಪೀಡಿತರ ಆರೋಗ್ಯದ ಹಿತದೃಷ್ಠಿಯಿಂದ ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಶಾಸಕ ಗಾಲಿ ಸೋಮಶೇಖರ ರೆಡ್ಡಿಯವರು ಆಗ್ರಹಿಸಿದರು.