ಹೊಸಪೇಟೆ(ವಿಜಯನಗರ): ವಿಜಯನಗರ ಜಿಲ್ಲೆಯ ಕಚೇರಿ ಪ್ರಾರಂಭ ಕುರಿತು ವಿಶೇಷ ಅಧಿಕಾರಿಗಳ ಜೊತೆಯೂ ಚರ್ಚಿಸಬೇಕಾಗಿದೆ. ಯಾವ ಇಲಾಖೆ ಕೂಡಲೇ ಕಾರ್ಯಾರಂಭ ಮಾಡಬೇಕು ಎಂದು ತೀರ್ಮಾನಿಸಬೇಕಾಗಿದೆ. ಆದಷ್ಟು ಬೇಗ ಕಚೇರಿಗಳ ಆರಂಭ ಆಗುತ್ತದೆ. ಅಕ್ಟೋಬರ್ ಒಳಗೆ ಅಧಿಕಾರಿಗಳು ಜಿಲ್ಲೆಗೆ ಬರಬಹುದು ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಹೇಳಿದರು.
ವಿಜಯನಗರದಲ್ಲಿ ಆದಷ್ಟು ಬೇಗ ಕಚೇರಿಗಳು ಆರಂಭ ಆಗುತ್ತವೆ: ಸಚಿವ ಆನಂದ ಸಿಂಗ್ - Vijayanagar latest news
ಜಿಲ್ಲೆಯಲ್ಲಿ ಯಾವ ಇಲಾಖೆ ಕೂಡಲೇ ಕಾರ್ಯಾರಂಭ ಮಾಡಬೇಕು ಎಂದು ತೀರ್ಮಾನಿಸಬೇಕಾಗಿದೆ. ಆದಷ್ಟು ಬೇಗ ಕಚೇರಿಗಳ ಆರಂಭ ಆಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಹೇಳಿದ್ದಾರೆ
ಸಚಿವ ಆನಂದ ಸಿಂಗ್
ಸುದ್ದಿಗಾರರೊಂದಿಗೆ ಅವರು ಹಂಪಿ ಭಾಗದಲ್ಲಿ ಹೋಂ ಸ್ಟೇ ಅಕ್ರಮ ಸಕ್ರಮ ಕುರಿತು ಮಾತನಾಡಿ, ಡಿಸಿ ಅವರು ಮಾತಾಡಿರುವುದು ಗಮನಕ್ಕೆ ಬಂದಿಲ್ಲ, ಬಂದ ನಂತರ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ ಎಂದರು.
ಕುಡಿಯುವ ನೀರಿಗೆ ವಿಷ ಬೆರೆಸುವವರಿಗೆ ನಾನ್ ಬೇಲಬಲ್ ವಾರೆಂಟ್ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನಾನು ಮರ್ಡರ್ ಕೇಸ್ ಹಾಕಬೇಕು ಎಂದು ಹೇಳಿಲ್ಲ. ನಾನ್ ಬೇಲಬಲ್ ಕೇಸ್ ಹಾಕಬೇಕು ಎಂದಿದ್ದೇನೆ. ಇದಕ್ಕೆಲ್ಲಾ ಟೈಂ ಹಿಡಿಯುತ್ತೆ, ಕಾಯ್ದೆ ಮಾಡಬೇಕು ಅಂದ ಕೂಡಲೇ ಮಾಡಲಾಗಲ್ಲ. ಕ್ಯಾಬಿನೆಟ್ ಚರ್ಚೆ ನಡೆಸಿ ಮಾಡುತ್ತೇವೆ ಎಂದು ತಿಳಿಸಿದರು.