ಬಳ್ಳಾರಿ: ನಗರದ ಡಾ.ರಾಜ್ ರಸ್ತೆಯ ಕ್ರೈಸ್ತ ಧರ್ಮ ಸಂಸ್ಥೆಗೆ ಸಂಬಂಧಿಸಿದ ನಿರ್ಮಾಣ ಹಂತದಕಟ್ಟಡದ ಕಾವಲುಗಾರ ಅನುಮಾಸ್ಪದವಾಗಿ ಕೊಲೆಯಾದ ಘಟನೆ ನಡೆದಿದೆ.
ಕಾವಲುಗಾರನ ಕೊಲೆ: ಕೌಟುಂಬಿಕ ಕಲಹ ಶಂಕೆ - ಕೊಲೆ
ಕ್ರೈಸ್ತ ಧರ್ಮ ಸಂಸ್ಥೆಗೆ ಸಂಬಂಧಿಸಿದ ನಿರ್ಮಾಣ ಹಂತದ ಕಟ್ಟಡದ ಕಾವಲುಗಾರ ಅನುಮಾಸ್ಪದವಾಗಿ ಕೊಲೆಯಾದ ಘಟನೆ ನಗರದಲ್ಲಿ ನಡೆದಿದೆ.
ಕಟ್ಟಡ ನಿರ್ಮಾಣದ ಕಾವಲುಗಾರನ ಅನುಮಾಸ್ಪದ ಕೊಲೆ
ಬಳ್ಳಾರಿ ನಗರ ನಿವಾಸಿಯಾದ ಮಸ್ತಾನ್ ಸಾಬ್ (58) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ದಿ ಚರ್ಚ್ ಆಫ್ ಸೌತ್ ಇಂಡಿಯಾ ಆಫ್ ಅಸೋಸಿಯೇಷನ್ ಕಂಪೌಂಡ್ನಲ್ಲಿ ಕಾವಲುಗಾರನ ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿ ನಡೆಸಿ, ಚಾಕುವಿನಿಂದ ಇರಿದು ಕೊಲೆಗೈದಿದ್ದಾರೆ ಎನ್ನಲಾಗುತ್ತಿದೆ.
ಘಟನಾ ಸ್ಥಳಕ್ಕೆ ಎಎಸ್ಪಿ ಲಾವಣ್ಯ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೌಟುಂಬಿಕ ಕಲಹದಿಂದಾಗಿ ಈ ಕೊಲೆಯಾಗಿರಬಹುದು ಎಂದು ಗಾಂಧಿನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.