ಬಳ್ಳಾರಿ: ಬಳ್ಳಾರಿ ತಾಲೂಕಿನ ಮೋಕಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಬೊಮ್ಮನಹಾಳ್ ಗ್ರಾಮದ ಆರ್.ವೆಂಕಟಲಕ್ಷ್ಮೀ(29) ಹಾಗೂ ಆಕೆಯ ಮಗಳು ಶಶಿರೇಖಾ(6) ಎಂಬುವವರು ಮಾ. 8ರಂದು ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ಮೋಕಾ ಪೊಲೀಸ್ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾದ ಮಹಿಳೆಯ ವಿವರ: 5 ಅಡಿ ಎತ್ತರ, ಕೋಲು ಮುಖ, ಎಣ್ಣೆ ಗೆಂಪು ಮೈಬಣ್ಣ, ಬಲ ಗಲ್ಲಕ್ಕೆ ಒಂದು ಸಣ್ಣ ಕಪ್ಪು ಮಚ್ಚೆ ಇದೆ. ಮನೆಯಿಂದ ಹೋಗುವಾಗ ತಿಳಿ ನೀಲಿ ಬಣ್ಣದ ಸೀರೆ ಧರಿಸಿರುತ್ತಾಳೆ. ಕನ್ನಡ, ತೆಲುಗು ಭಾಷೆ ಮಾತನಾಡುತ್ತಾಳೆ.
ಕಾಣೆಯಾದ ಮಗುವಿನ ವಿವರ: 3.5 ಅಡಿ ಎತ್ತರ, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ, ಬಲ ಕಣ್ಣಿನ ಕೆಳಗೆ ಒಂದು ಕಪ್ಪು ಮಚ್ಚೆ ಇರುತ್ತದೆ. ಮನೆಯಿಂದ ಹೋಗುವಾಗ ಗುಲಾಬಿ ಬಣ್ಣದ ಗೌನ್ ಧರಿಸಿರುತ್ತಾಳೆ. ಕನ್ನಡ, ತೆಲುಗು ಭಾಷೆ ಮಾತನಾಡುತ್ತಾಳೆ.
ಅಂದು ಮನೆಯಿಂದ ಹೊರಗೆ ಹೋದವರು ಮರಳಿ ಬಂದಿರುವುದಿಲ್ಲ ಎಂದು ದೂರು ದಾಖಲಾಗಿದೆ. ಈ ತಾಯಿ ಮತ್ತು ಮಗುವಿನ ಕುರಿತು ಯಾವುದೇ ಮಾಹಿತಿ ಸಿಕ್ಕಲ್ಲಿ ಎಸ್ಪಿ ದೂ.ಸಂ:08392-258100,ಡಿಎಸ್ಪಿ ದೂ.ಸಂ:9480803021, ಸಿಪಿಐ ದೂ.ಸಂ:9480803031, ಪಿಎಸ್ಐ ಮೋಕಾ ಪೊಲೀಸ್ ಠಾಣೆ ದೂ.ಸಂ:9480803050, 08392-293228ಕ್ಕೆ ಕರೆ ಮಾಡಿ ತಿಳಿಸಬೇಕು ಎಂದು ಕೋರಲಾಗಿದೆ.