ಕರ್ನಾಟಕ

karnataka

ETV Bharat / state

ಬಳ್ಳಾರಿಯಲ್ಲಿ ಕನಕ ದುರ್ಗಮ್ಮ ದೇವಿಯ ಅದ್ಧೂರಿ ಸಿಡಿ ಬಂಡಿ ಉತ್ಸವ - ಶ್ರೀ ಕನಕ ದುರ್ಗಮ್ಮ ದೇವಿಯ ಸಿಡಿಬಂಡಿ ಉತ್ಸವ

ಶ್ರೀಕನಕ ದುರ್ಗಮ್ಮ ದೇವಿಯ ಸಿಡಿಬಂಡಿ ಉತ್ಸವದಲ್ಲಿ ಬಳ್ಳಾರಿ ಜಿಲ್ಲೆಯ ಕರ್ಚೇಡು ಗ್ರಾಮಸ್ಥರು ಭಜನೆ ಪದದೊಂದಿಗೆ ಕುಣಿದು ತಮ್ಮ ಹರಕೆಯನ್ನು ತೀರಿಸಿದರು.

The karchedu villagers
ದೇವಿಗೆ ಭಜನೆ ಪದದೊಂದಿಗೆ ಕುಣಿದು ಹರಕೆ ತೀರಿಸಿದ ಕರ್ಚೇಡು ಗ್ರಾಮಸ್ಥರು

By

Published : Mar 4, 2020, 7:58 AM IST

Updated : Mar 4, 2020, 8:20 AM IST

ಬಳ್ಳಾರಿ: ಜಿಲ್ಲೆಯಲ್ಲಿ ನಡೆದ ಆದಿ ದೇವತೆ ಶ್ರೀ ಕನಕ ದುರ್ಗಮ್ಮ ದೇವಿಯ ಸಿಡಿಬಂಡಿ ಉತ್ಸವ ಅದ್ಧೂರಿಯಾಗಿ ಜರುಗಿತು. ಉತ್ಸವದಲ್ಲಿ ಗ್ರಾಮಸ್ಥರು ಸೇರಿದಂತೆ ಬೇರೆ ಬೇರೆ ಊರುಗಳಿಂದ ಆಗಮಿಸಿದ್ದ ಭಕ್ತರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಕರ್ಚೇಡು ಗ್ರಾಮದಲ್ಲಿ ಅದ್ಧೂರಿ ಸಿಡಿ ಬಂಡಿ ಉತ್ಸವ

ಸಿಡಿ ಬಂಡಿ ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಿ ಗಮನ ಸೆಳೆದವು. ಭಜನಾ ಪದ ಹಾಡುತ್ತ ಭಕ್ತರು ಹೆಜ್ಜೆ ಹಾಕಿದರು. ಡೊಳ್ಳು, ವೀರಭದ್ರ ಕುಣಿತ ಉತ್ಸವಕ್ಕೆ ಮೆರಗು ತಂದವು. ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವಿಗೆ ಬೇಡಿಕೊಂಡು ಹರಕೆ ಕಟ್ಟಿಕೊಂಡರೆ, ಇನ್ನೂ ಕೆಲವರು ತಮ್ಮ ಇಷ್ಟಾರ್ಥಗಳು ಈಡೇರಿದ್ದಕ್ಕೆ ಹರಕೆ ತೀರಿಸಿದರು.

Last Updated : Mar 4, 2020, 8:20 AM IST

ABOUT THE AUTHOR

...view details