ಕರ್ನಾಟಕ

karnataka

ETV Bharat / state

ವಿವಿ ಕುಲಪತಿಗೆ ಅವಮಾನ ಮಾಡಿದ್ದು ಕನ್ನಡಿಗರನ್ನೇ ಅವಮಾನಿಸಿದಂತೆ: ಡಾ. ಸ.ಚಿ. ರಮೇಶ್​ - hospete news kannada university Chancellor Dr. Ramesh

ಕನ್ನಡ ವಿಶ್ವವಿದ್ಯಾಲಯದ ಕುಲಪತಿಗೆ ಕಳೆದ ಹಂಪಿ ಉತ್ಸವದಲ್ಲಿ ಅವಮಾನ ಮಾಡಿದ್ದು, ಅದು ರಾಜ್ಯ ಕನ್ನಡಿಗರಿಗೇ ಮಾಡಿದ ಅಪಮಾನವೆಂದು ಕುಲಪತಿ ಡಾ. ಸ.ಚಿ ರಮೇಶ್​ ಹೇಳಿದ್ರು.‌

hospete
ಕುಲಪತಿ ಡಾ.ಸ.ಚಿ ರಮೇಶ್​

By

Published : Jan 2, 2020, 1:23 PM IST

ಹೊಸಪೇಟೆ: ಕನ್ನಡ ವಿಶ್ವವಿದ್ಯಾಲಯದ ಕುಲಪತಿಗೆ ಕಳೆದ ಹಂಪಿ ಉತ್ಸವದಲ್ಲಿ ಅವಮಾನವನ್ನು ಮಾಡಿದ್ದು ಕನ್ನಡಿಗರಿಗೇ ಮಾಡಿದ ಅಪಮಾನ ಎಂದು ಕುಲಪತಿ ಡಾ. ಸ.ಚಿ. ರಮೇಶ್​ ಹೇಳಿದ್ರು.

ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ ರಮೇಶ್​

ಹಂಪಿ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಶಿಲ್ಪ ಕಲಾವಿದರ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಉತ್ಸವದಲ್ಲಿ ಕುಲಪತಿ ಅವರಿಗೆ ಹಂಪಿ ಉತ್ಸದಲ್ಲಿ ಅವಮಾನವನ್ನು ಮಾಡಲಾಗಿತ್ತು. ಅವರಿಗೆ ಅಹ್ವಾನ ಪತ್ರಿಕೆಯನ್ನು ಸಹ ನೀಡಿರಲಿಲ್ಲ. ಉತ್ಸವ ಕಾರ್ಯಕ್ರಮದಲ್ಲಿ ಅವರನ್ನು ಹೀನಾಯವಾಗಿ ಕಾಣಲಾಗಿತ್ತು. ವೇದಿಕೆಯ ಎಲ್ಲೋ ಮೂಲೆಯಲ್ಲಿ ಆಸನಗಳನ್ನು‌ ನೀಡಿದ್ದರು. ಇದು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗೆ ಮಾಡಿದ ಅಪಮಾನ ಅಲ್ಲ. ಕನ್ನಡಿಗರಿಗೆಲ್ಲ ಮಾಡಿದ ಅಪಮಾನ ಎಂದು ಬೇಸರವನ್ನು ವ್ಯಕ್ತಪಡಿಸಿದರು.

ಇನ್ನು ಕನ್ನಡ ವಿಶ್ವವಿದ್ಯಾಲಯವು ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹವನ್ನು ನೀಡುತ್ತದೆ. ನೂರಾರು ಸಂಶೋಧನೆಗಳನ್ನು ನಡೆಸಿದ ಹೆಗ್ಗಳಿಕೆ ವಿಶ್ವವಿದ್ಯಾಲಯಕ್ಕೆ ಸಲ್ಲುತ್ತದೆ. ಅಂತಹ ದೇವಾಲಯದ ಕುಲಪತಿಗಳನ್ನು ಅವಮಾನ ಮಾಡುವುದು ಶೋಭೆ ತರವಂತಹ ಕೆಲಸವಲ್ಲ. ಇಂತಹ ಘಟನೆಗಳು ಮರುಕಳಿಸದಿರಲಿ ಎಂದರು.

ABOUT THE AUTHOR

...view details