ಕರ್ನಾಟಕ

karnataka

ETV Bharat / state

ಲಾಕ್​ಡೌನ್​​ ಬಳಿಕ ಚೇತರಿಕೆ ಕಂಡ ಹನುಮಪ್ಪ: 10.23 ಲಕ್ಷ ಆದಾಯ

ಲಾಕ್ಡೌನ್ ಮತ್ತು ಅದರ ಬಳಿಕ ಆದಾಯದ ತೀವ್ರ ಕೊರತೆ ಎದುರಿಸುತ್ತಿದ್ದ ಗಂಗಾವತಿ ತಾಲ್ಲೂಕಿನ ಐತಿಹಾಸಿಕ ಮತ್ತು ಧಾರ್ಮಿಕ ತಾಣ ಅಂಜನಾದ್ರಿ ಬೆಟ್ಟದ ಹನುಮಪ್ಪನ ದೇಗುಲ, ಇದೀಗ ನಿಧಾನವಾಗಿ ಆದಾಯ ವೃದ್ಧಿಸಿಕೊಳ್ಳುವ ದಾರಿಗೆ ಮರಳುತ್ತಿದೆ.

The income from the Anjanadri temple in Gangavati Taluk has increased
ಲಾಕ್​ಡೌನ್​​ ಬಳಿಕ ಚೇತರಿಕೆ ಕಂಡ ಹನುಮಪ್ಪ: 10.23 ಲಕ್ಷ ಆದಾಯ

By

Published : Sep 24, 2020, 7:59 PM IST

ಗಂಗಾವತಿ: ಲಾಕ್​ಡೌನ್ ಮತ್ತು ಅದರ ಬಳಿಕ ಆದಾಯದ ತೀವ್ರ ಕೊರತೆ ಎದುರಿಸುತ್ತಿದ್ದ ತಾಲೂಕಿನ ಐತಿಹಾಸಿಕ ಮತ್ತು ಧಾರ್ಮಿಕ ತಾಣ ಅಂಜನಾದ್ರಿ ಬೆಟ್ಟದ ಹನುಮಪ್ಪನ ದೇಗುಲ, ಇದೀಗ ನಿಧಾನವಾಗಿ ಆದಾಯ ವೃದ್ಧಿಸಿಕೊಳ್ಳುತ್ತಿದೆ.

ತಹಶೀಲ್ದಾರ್ ಕವಿತಾ ಹಾಗೂ ಕಂದಾಯ ನಿರೀಕ್ಷಕ ಮಂಜುನಾಥ ನೇತೃತ್ವದಲ್ಲಿ ಗುರುವಾರ ನಡೆದ ದೇಗುಲದ ಹುಂಡಿ ಎಣಿಕೆ ಕಾರ್ಯದಲ್ಲಿ ಒಟ್ಟು 10.23 ಲಕ್ಷ ರೂಪಾಯಿ ಮೊತ್ತದ ಆದಾಯ ಸಂಗ್ರಹವಾಗಿದೆ. ಪ್ರತಿ ಬಾರಿಯ ಹುಂಡಿ ಎಣಿಕೆ ಸಂದರ್ಭದಲ್ಲಿ ವಿದೇಶಿ ನೋಟು, ನಾಣ್ಯ ಪತ್ತೆಯಾಗುತ್ತಿತ್ತು, ಆದರೆ ಈ ಬಾರಿ ಯಾವುದೇ ವಿದೇಶಿ ನಾಣ್ಯ ಸಿಕ್ಕಿಲ್ಲ.

ಲಾಕ್​ಡೌನ್​​ ಬಳಿಕ ಚೇತರಿಕೆ ಕಂಡ ಹನುಮಪ್ಪ: 10.23 ಲಕ್ಷ ಆದಾಯ

ಮಾಸಿಕ ಸರಾಸರಿ ಮೂರು ಲಕ್ಷ ರೂಪಾಯಿ ಆದಾಯ ಹೊಂದಿದ್ದ ದೇಗುಲ, ಮಾರ್ಚ್​​ 23ರ ಲಾಕ್​ಡೌನ್ ಬಳಿಕ ಮೇ 30ರಂದು ಹುಂಡಿ ಎಣಿಕೆ ಮಾಡಿದಾಗ 3.08 ಲಕ್ಷ ಮೊತ್ತದ ಹಣ ಸಂಗ್ರಹವಾಗಿತ್ತು. ಇದೀಗ ಮತ್ತೆ ದೇಗುಲದ ಆದಾಯ ಹೆಚ್ಚಾಗಿದೆ.

ABOUT THE AUTHOR

...view details