ಬಳ್ಳಾರಿ:ವಿಶ್ವವಿಖ್ಯಾತ ವಿಜಯನಗರದ ಹಂಪಿ ಉತ್ಸವವು ಮೈಸೂರಿನ ದಸರಾ ಉತ್ಸವಕ್ಕಿಂತ ಹೆಚ್ಚು ಮೆರುಗು ತರುವಂತದ್ದಾಗಿದೆ ಎಂದು ವಿ.ಎಸ್.ಉಗ್ರಪ್ಪ ತಿಳಿಸಿದರು.
ನಗರದ ಹೊರವಲಯದ ಮಿಲ್ಲರ್ ಪೇಟ್ ಹತ್ತಿರದ ಕಲ್ಯಾಣಸ್ವಾಮಿ ಮಠದಲ್ಲಿ ಏಳನೇ ದಿನದ ನವರಾತ್ರಿ ದೇವಿಯ ಪುರಾಣ ಕಾರ್ಯಕ್ರಮ ನಡೆಯಿತು. ನಂತರ ಜಿಲ್ಲೆಯ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಜೀವನದಲ್ಲಿ ಒಮ್ಮೆಯಾದ್ರೂ ನೋಡಲೇ ಬೇಕಾಗಿರುವ ಸ್ಥಳದ ಪೈಕಿಯಲ್ಲಿ ವಿಜಯನಗರ ಸಾಮ್ರಾಜ್ಯದ ಹಂಪಿಯು ಒಂದಾಗಿದೆ ಎಂದರು.
ಇನ್ನು ಇಂದು ಕರ್ನಾಟಕದ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದರೂ ಸಹ ಹಂಪಿ ಉತ್ಸವದ ಬಗ್ಗೆ ಯಾವುದೇ ಮಾತನ್ನು ಸಹ ಆಡುತ್ತಿಲ್ಲ ಎಂದು ದೂರಿದರು. ಕಳೆದ ವರ್ಷ ಹಂಪಿ ಉತ್ಸವ ಮಾಡಲು ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಮೇಲೆ ಒತ್ತಡ ತಂದು (ಆಗ ಈ ಬಳ್ಳಾರಿ ಭಾಗದ ಸಂಸದ ಸದಸ್ಯನಾಗಿದ್ದೆ) ಹಂಪಿ ಉತ್ಸವವನ್ನು ನೇರವೆಸಿದ್ದೇವೆ ಎಂದು ಉಗ್ರಪ್ಪ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಉಗರಗೋಳ ಮಹಾಂತ ಮಹಾಸ್ವಾಮಿಗಳು, ವಿ.ಎಸ್ ಉಗ್ರಪ್ಪ, ಜಿಲ್ಲಾ ಪಂಚಾಯತ್ ಸದಸ್ಯ ಅಲಂ ಪ್ರಶಾಂತ, ಬಿ.ಎಮ್.ಪಾಟೀಲ, ಕೆ.ಎರ್ರಿಸ್ವಾಮಿ, ಸಮಾಜ ಗಣ್ಯರಾದ ಆನೆ ಗಂಗಣ್ಣ, ಎತ್ತಿನ ಬೂದಿಹಾಳ ಬಸವರಾಜು, ನೃತ್ಯ ಶಿಕ್ಷಕಿ ಹೇಮಾ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.