ಹೊಸಪೇಟೆ: ಅಂತರ್ಜಾತಿ ಯುವಕ-ಯುವತಿ ಪ್ರೀತಿಸಿ ಊರು ಬಿಟ್ಟ ಹಿನ್ನೆಲೆ ಹರಪನಹಳ್ಳಿ ತಾಲೂಕಿನ ಕನ್ನನಾಯಕನಹಳ್ಳಿಯಲ್ಲಿ (ಅಗ್ರಹಾರ) ಹುಡುಗನ ಸಂಬಂಧಿಕರ ಮೇಲೆ ಹಲ್ಲೆ ನಡೆಸಿ ಅವರ ಮನೆ ಧ್ವಂಸ ಮಾಡಿರುವ ಘಟನೆ ನಡೆದಿದೆ.
ಪ್ರೀತಿಸಿ ಊರು ಬಿಟ್ಟ ಪ್ರೇಮಿಗಳು: ಹುಡುಗಿ ಕಡೆಯವರಿಂದ ಹುಡುಗನ ಸಂಬಂಧಿಕರ ಮನೆ ಧ್ವಂಸ - ಹೊಸಪೇಟೆಯಲ್ಲಿ ಹುಡುಗಿ ಕಡೆಯವರಿಂದ ಹುಡುಗನ ಸಂಬಂಧಿಕರ ಮನೆ ಧ್ವಂಸ
ದುರಗೇಶ್ ಮತ್ತು ಯುವತಿ ಮನೆಬಿಟ್ಟು ಹೋದ ಕಾರಣ ಕುಪಿತಗೊಂಡ ಹುಡುಗಿಯ ಕಡೆಯವರು ಹುಡುಗನ ಸಂಬಂಧಿಕರ ಮನೆ ಧ್ವಂಸಗೊಳಿಸಿದ್ದಾರೆ.
![ಪ್ರೀತಿಸಿ ಊರು ಬಿಟ್ಟ ಪ್ರೇಮಿಗಳು: ಹುಡುಗಿ ಕಡೆಯವರಿಂದ ಹುಡುಗನ ಸಂಬಂಧಿಕರ ಮನೆ ಧ್ವಂಸ The girl's relatives destroyed boy's relatives home](https://etvbharatimages.akamaized.net/etvbharat/prod-images/768-512-10812809-thumbnail-3x2-sss.jpg)
ಹುಡುಗಿ ಕಡೆಯವರಿಂದ ಹುಡುಗನ ಸಂಬಂಧಿಕರ ಮನೆ ಧ್ವಂಸ
ಹುಡುಗಿ ಕಡೆಯವರಿಂದ ಹುಡುಗನ ಸಂಬಂಧಿಕರ ಮನೆ ಧ್ವಂಸ
ದುರಗೇಶ್ ಮತ್ತು ಯುವತಿ ಮನೆಬಿಟ್ಟು ಹೋದ ಕಾರಣ ಕುಪಿತಗೊಂಡ ಹುಡುಗಿಯ ಕಡೆಯವರು ಹುಡುಗನ ಸಂಬಂಧಿಕರ ಮನೆ ಧ್ವಂಸಗೊಳಿಸಿದ್ದಾರೆ. ಮನೆಯಲ್ಲಿನ ಟಿವಿ ಒಡೆದು, ಹಣ, ಚಿನ್ನ, ಅಕ್ಕಿ ಬೆಳೆ, ಬಟ್ಟೆ, ಕದ್ದೊಯ್ದಿದ್ದಾರೆ. ಎರಡು ಎಮ್ಮೆ, ಎರಡು ಟಗರುಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಹರಪನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Feb 28, 2021, 5:21 PM IST