ಬಳ್ಳಾರಿ:ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧಿಸಿ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯು ಕೈಗೊಂಡಿದ್ದ ಅನಿರ್ದಿಷ್ಟಾವಧಿ ಪ್ರತಿಭಟನೆ ಎಂಟನೇ ದಿನಕ್ಕೆ ಕಾಲಿಟ್ಟಿದೆ. ಹಲವು ದಲಿತ ಸಂಘಟನೆಗಳ ಮುಖಂಡರು ಇದಕ್ಕೆ ಬೆಂಬಲ ಸೂಚಿಸಿದ್ದಾರೆ.
ಬಳ್ಳಾರಿಯಲ್ಲಿ ಪ್ರತಿಭಟನೆಗೆ ಮಿಶ್ರ ಪ್ರತಿಕ್ರಿಯೆ ಇಲ್ಲಿನ ಡಿಸಿ ಕಚೇರಿಯ ಎದುರು ಸ್ಥಾಪಿಸಲಾದ ತಾತ್ಕಾಲಿಕ ಟೆಂಟ್ನಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಎ.ಮಾನಯ್ಯ, ಮುಂಡರಗಿ ನಾಗರಾಜ ನೇತೃತ್ವದಲ್ಲಿ ನಾನಾ ದಲಿತ ಸಂಘಟನೆಗಳ ಮುಖಂಡರು ಧರಣಿಯಲ್ಲಿ ಪಾಲ್ಗೊಂಡು ಕೆಲಕಾಲ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ರು.
ಹೊಸಪೇಟೆಯಲ್ಲಿ ವಿಜಯನಗರ ಜಿಲ್ಲೆ ಬೆಂಬಲಿಸಿ ವಕೀಲರಿಂದ ಬೈಕ್ ರ‍್ಯಾಲಿ:
ವಿಜಯನಗರ ಜಿಲ್ಲೆಯನ್ನು ಬೆಂಬಲಿಸಿ ಹೊಸಪೇಟೆಯ ಕೋರ್ಟ್ ಆವರಣದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೂ ವಕೀಲರು ಬೈಕ್ ರ‍್ಯಾಲಿ ನಡೆಸಿದರು.
ಕೋರ್ಟ್ ಆವರಣದಿಂದ ಪ್ರಾರಂಭವಾದ ಬೈಕ್ ರ‍್ಯಾಲಿ ರೋಟರಿ ವೃತ್ತ, ನಗರಸಭೆ, ರಾಮಾ ಟಾಕೀಸ್, ವಾಲ್ಮೀಕಿ ವೃತ್ತದ ಮೂಲಕ ಉಪ ವಿಭಾಗಾಧಿಕಾರಿ ಕಚೇರಿಗೆ ಸಮಾಪ್ತಿಯಾಯಿತು.
ಓದಿ:ತೈಲ ಬೆಲೆ ಏರಿಕೆ ಖಂಡಿಸಿ ಎಸ್‌ಯುಸಿಐಸಿ ಪ್ರತಿಭಟನೆ
ಎರಡು ದಶಕಗಳ ಹೋರಾಟದ ಬಳಿಕ ವಿಜಯನಗರ ಜಿಲ್ಲೆ ರಚನೆಗೊಳ್ಳುತ್ತಿದೆ. ಇದು ಪಶ್ಚಿಮ ತಾಲೂಕುಗಳ ಅಭಿವೃದ್ಧಿಗಾಗಿ ಸಹಕಾರಿಯಾಗಲಿದೆ. ವಿಜಯನಗರ ಜಿಲ್ಲೆಯಿಂದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ವಾಣಿಜ್ಯ, ಆರೋಗ್ಯ, ಪ್ರವಾಸೋದ್ಯಮ, ನ್ಯಾಯಾಲಯ ಸೌಲಭ್ಯಗಳು ಲಭ್ಯವಾಗಲಿವೆ. ಜನತೆಗೆ ಸ್ಥಳೀಯವಾಗಿ ಸೇವೆಗಳು ಸಿಗಲಿವೆ ಎಂದು ಪ್ರತಿಭಟನಾಕಾರರು ಹೇಳಿದರು.