ಬಳ್ಳಾರಿ: ಬೆಂಗಳೂರಲ್ಲಿ ಏನು ನಡಿಯುತ್ತೆ ಅನ್ನೋದು ನನಗೆ ಗೊತ್ತಿಲ್ಲ. ನಾನು ಬಹಳ ದಿನಗಳಾಯಿತು ಬೆಂಗಳೂರಿಗೆ ಹೋಗಿಲ್ಲ. ಹೈಕಮಾಂಡ್ ನಲ್ಲಿ ಏನು ಚರ್ಚೆ ನಡೆಯುತ್ತೆ ಎಂದು ಕೂಡಾ ನನಗೆ ತಿಳಿದಿಲ್ಲವೆಂದು ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಸಿಎಂ ಆಗಿ ಬಿಎಸ್ವೈ ಮುಂದುವರೆದರೆ ಮಾತ್ರ ಅಭಿವೃದ್ಧಿ: ಗಾಲಿ ಸೋಮಶೇಖರ ರೆಡ್ಡಿ - Bellary Gali Somashekhara Reddy News
ಉತ್ತರ ಕರ್ನಾಟಕ ಭಾಗದವರನ್ನ ಸಿಎಂ ಆಗಿ ನೇಮಕ ಮಾಡುವ ವಿಚಾರ ಕುರಿತಾದ ಪ್ರಶ್ನೆಯೊಂದಕ್ಕೆ, ಮುಖ್ಯಮಂತ್ರಿ ಆಗಿ ಬಿಎಸ್ ವೈ ಮುಂದುವರೆದರೆ ಮಾತ್ರ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯಾಗಲು ಸಾಧ್ಯವೆಂದು ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಶಾಸಕ ಗಾಲಿ ಸೋಮಶೇಖರ ರೆಡ್ಡಿ
ನಗರದಲ್ಲಿಂದು ನೂತನ ತರಕಾರಿ ಮಾರುಕಟ್ಟೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದವರನ್ನ ಸಿಎಂ ಆಗಿ ನೇಮಕ ಮಾಡುವ ವಿಚಾರ ಕುರಿತಾದ ಪ್ರಶ್ನೆಯೊಂದಕ್ಕೆ, ಮುಖ್ಯಮಂತ್ರಿ ಆಗಿ ಯಡಿಯೂರಪ್ಪ ಅವರೇ ಮುಂದುವರೆದರೆ ಮಾತ್ರ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯಾಗಲು ಸಾಧ್ಯ ಎಂದರು.
ಸಾಮಾಜಿಕ ಅಂತರ ಕಾಯ್ದುಕೊಂಡರೆ ಮಾತ್ರ ಕೊರೊನಾ ಸೋಂಕು ತಡೆಗಟ್ಟಲು ಸಾಧ್ಯ. ಬಡ ಮತ್ತು ಕೂಲಿ ಕಾರ್ಮಿಕರಲ್ಲಿ ಇದು ಅಸಾಧ್ಯವಾದರು ಕೂಡ ಕಡ್ಡಾಯವಾಗಿ ಪಾಲಿಸಲೆಬೇಕು ಶಾಸಕರು ಸಲಹೆ ನೀಡಿದರು.