ವಿಜಯನಗರ : ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಮಾಲವಿ ಜಲಾಶಯ ದಶಕಗಳ ಬಳಿಕ ಇದೀಗ ಮಳೆಯಿಂದಾಗಿ ತುಂಬಿ ತುಳುಕುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಆದರೆ ನಿನ್ನೆ ಜಲಾಶಯ ನೋಡಲು ಬಂದಿದ್ದ ಏಳು ಜನರಲ್ಲಿ, ಎಂ.ಆರ್. ಹಾಲೇಶ್( 34), ಚರಣ್ ರಾಜ್ (33) ಎಂಬವರು ನಾಪತ್ತೆಯಾಗಿದ್ದರು.
ಅಗ್ನಿಶಾಮಕ ದಳದ ಸಿಬ್ಬಂದಿಯ ತೀವ್ರ ಶೋಧಕಾರ್ಯದ ನಂತರ ಇಂದು ನಾಪತ್ತೆಯಾಗಿದ್ದ ಈ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಮೃತ ಚರಣರಾಜ್ ಕೊಟ್ಟೂರಿನ ಮೂಲದವರಾಗಿದ್ದು, ರಾಂಪುರ ಗ್ರಾಮದ ಜ್ಞಾನತುಂಗಾ ಹಿರಿಯ ಪ್ರಾರ್ಥನಾ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಮೃತ ಎಂ.ಆರ್. ಹಾಲೇಶ್ ಕೂಡ್ಲಿಗಿ ಮೂಲದವರಾಗಿದ್ದು, ಪೋಸ್ಟಲ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದರು.