ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಮಹಾಮಾರಿ ಕೋವಿಡ್ - 19 ಸೋಂಕು ನಿಯಂತ್ರಣಕ್ಕೆ ಬರೋಬ್ಬರಿ 16.23 ಕೋಟಿ ರೂ.ಗಳಷ್ಟು ಹಣ ಖರ್ಚಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರೋಬ್ಬರಿ 16.23 ಕೋಟಿ ರೂ.ಗಳಷ್ಟು ಖರ್ಚಾಗಿದೆ: ಡಿಸಿ ನಕುಲ್ - Corona News
ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಪ್ರಮಾಣವು ಅನ್ಯ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಕಮ್ಮಿಯಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದ್ದಾರೆ.
ಬಳ್ಳಾರಿಯ ಡಿಸಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಡಿಎಂಎಫ್ ನಿಂದ ಅಂದಾಜು 10 ಕೋಟಿ ರೂ. ಹಾಗೂ ಎಸ್ ಡಿಆರ್ ಎಫ್ ನಿಂದ ಮೂರು ಕೋಟಿ ರೂ. ಎನ್ ಎಂಡಿಸಿ ಸಿಎಸ್ ಆರ್ ಸಿ ಫಂಡ್ ನಿಂದ ಎರಡೂವರೆ ಕೋಟಿ ರೂ.ಗಳಷ್ಟು ಹಣ ಖರ್ಚಾಗಿರುತ್ತೆ. ಕಳೆದ ಆಗಸ್ಟ್ 25 ರವರೆಗೆ ಮಾತ್ರ ಇಷ್ಟೊಂದು ಮೊತ್ತವು ಖರ್ಚಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಪ್ರಮಾಣವು ಅನ್ಯ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಕಮ್ಮಿಯಾಗಿದೆ. ಜಿಲ್ಲೆಯ ಮಟ್ಟಿಗೆ ಮಾತ್ರ ಈ ಪ್ರಕರಣಗಳು ಹೆಚ್ಚಾಗಿ ಕಂಡು ಬಂದರೂ ಬೇರೆ ಜಿಲ್ಲೆಗಳಿಗಿಂತಲೂ ನಮ್ಮ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆ ಇವೆ. ಅಲ್ಲದೇ, ಸಾವಿನ ಪ್ರಮಾಣವೂ ಕೂಡ ಶೇಕಡಾವಾರು ಕಡಿಮೆಯಾಗಿದೆ ಎಂದು ಡಿಸಿ ನಕುಲ್ ತಿಳಿಸಿದ್ದಾರೆ.