ಬಳ್ಳಾರಿ:ಗಣಿನಗರಿಯಲ್ಲಿ ಪರಿವೀಕ್ಷಣಾಲಯದಿಂದ ಮಕ್ಕಳು ಕಾಣೆಯಾಗಿರುವ ಘಟನೆ ನಡೆದಿದೆ.
ಬಳ್ಳಾರಿ: ಪರಿವೀಕ್ಷಣಾಲಯದಿಂದ ನಾಪತ್ತೆಯಾದ ಮಕ್ಕಳು - ಪರಿವೀಕ್ಷಣಾಲಯದ ಮಕ್ಕಳು ನಾಪತ್ತೆ ಸುದ್ದಿ
ಬಳ್ಳಾರಿಯಲ್ಲಿ ಪರಿವೀಕ್ಷಣಾಲಯದಿಂದ ಮಕ್ಕಳು ಕಾಣೆಯಾಗಿರುವ ಘಟನೆ ನಡೆದಿದೆ.

ಕಾಣೆಯಾದ ಮಕ್ಕಳು
ನಗರದ ಸಿರುಗುಪ್ಪ ರಸ್ತೆಯಲ್ಲಿರುವ ಪರಿವೀಕ್ಷಣಾಲಯದಿಂದ ಶಿವಕುಮಾರ(16) ಮತ್ತು ಗೌಸ್ ಮಹಮ್ಮದ್ (17) ಎಂಬುವವರು ಕಾಣೆಯಾಗಿದ್ದಾರೆ. ಈ ಬಾಲಕರು ಬೆಳಗ್ಗೆ ಪರಿವೀಕ್ಷಣಾಲಯದಿಂದ ತಪ್ಪಿಸಿಕೊಂಡು ಹೋಗಿದ್ದು, ನಗರದ ವಿವಿಧೆಡೆ ಹುಡುಕಾಡಿದರೂ ಪತ್ತೆಯಾಗದ ಕಾರಣ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಇನ್ನು ಈ ಸಂಬಂಧ ನಗರದ ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.