ಬಳ್ಳಾರಿ (ವಿಜಯನಗರ) :ಅರಣ್ಯ ಇಲಾಖೆ, ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಹಾಗೂ ಗ್ರೀನ್ ಹೆಚ್‌ಬಿಹೆಚ್ ನೇತೃತ್ವದಲ್ಲಿ ಅಂಕಸಮುದ್ರದಲ್ಲಿ ಇಂದು ಮತ್ತು ನಾಳೆ ನಡೆಯುತ್ತಿರುವ 2 ದಿನಗಳ ಹಕ್ಕಿ ಹಬ್ಬಕ್ಕೆ ಶಾಸಕ ಎಸ್ ಭೀಮಾನಾಯ್ಕ್ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಬಳ್ಳಾರಿ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ರಾಮಪ್ಪ ಚಳಕಾಪುರೆ, ಅಂಕಸಮುದ್ರ ಪಕ್ಷಿ ಸಂರಕ್ಷಣೆ ಮಾಡಿಕೊಡಲು ಇಲಾಖೆಯಿಂದ ಕೆಲಸ ನಡೆಯುತ್ತಿದೆ. ಅಂಕ ಸಮುದ್ರವು ಪ್ರವಾಸೋದ್ಯಮವಾಗಿ ಹೊರಹೊಮ್ಮ ಬೇಕು ಎನ್ನುವ ಉದ್ದೇಶದಿಂದ ಪ್ರಥಮ ಬಾರಿಗೆ ಈ ಹಕ್ಕಿ ಹಬ್ಬವನ್ನು ಆಯೋಜಿಸಲಾಗಿದೆ.
ಎರಡು ದಿನಗಳಲ್ಲಿ ಪಕ್ಷಿಗಳ ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ, ಪ್ರಾಯೋಗಿಕ ತಂತ್ರಾಂಶಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ ಎಂದರು. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್ ಲಿಂಗರಾಜು ಮಾತನಾಡಿ, ಸ್ಥಳೀಯರು ಈ ಅಂಕಸಮುದ್ರಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ.