ಹೊಸಪೇಟೆ/ಸಂಡೂರು: ನಗರದಲ್ಲಿ ಎರಡು ಪ್ರತ್ಯೇಕ ಅಪಘಾತ ಸಂಭವಿಸಿದೆ. ತಾಲೂಕಿನ ಕಡ್ಡಿರಾಂಪುರದಲ್ಲಿ ಬೈಕ್ನಿಂದ ಆಯತಪ್ಪಿ ಬಿದ್ದು ಸವಾರನೊಬ್ಬ ಮೃತಪಟ್ಟರೆ, ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ವಡ್ಡು ಗ್ರಾಮದ ಬಳಿ ನಡೆದ ಕಾರು ಮತ್ತು ಬೈಕ್ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ.
ಹೊಸಪೇಟೆ ಡ್ಯಾಂ ನಿವಾಸಿ ಶ್ರೀನಿವಾಸ (28) ಬೈಕ್ನಿಂದ ಆಯತಪ್ಪಿ ಬಿದ್ದು ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಶ್ರೀನಿವಾಸ ತನ್ನ ಗೆಳೆಯರೊಂದಿಗೆ ಹೊಲಕ್ಕೆ ಊಟಕ್ಕೆ ತೆರಳಿದ್ದ ಸಂದರ್ಭದಲ್ಲಿ ಜಗಳವಾಡಿಕೊಂಡಿದ್ದಾನೆ. ಗೆಳೆಯರಿಂದ ತಪ್ಪಿಸಿಕೊಂಡು ಬರುವಾಗ ಬೈಕ್ ಆಯತಪ್ಪಿ ಬಿದ್ದು, ಮೃತಪಟ್ಟಿದ್ದಾನೆ. ಸಾಯುವ ಮುನ್ನ ಶ್ರೀನಿವಾಸ ಅತ್ತೆಗೆ ಕರೆ ಮಾಡಿ ಚಿನ್ನಪ್ಪ ಎನ್ನುವ ಸ್ನೇಹಿತ ನನಗೆ ಹೊಡೆಯುತ್ತಿದ್ದಾನೆ ಎಂದು ತಿಳಿಸಿದ್ದಾನೆ ಎನ್ನಲಾಗ್ತಿದೆ.
ಈ ಕುರಿತು ಮೃತ ಶ್ರೀನಿವಾಸನ ಅತ್ತೆ ಮುನಿಯಮ್ಮ ದೂರು ನೀಡಿದ್ದು, ಹಂಪಿ ಪೊಲೀಸ್ ಠಾಣೆಯ ಸಿಪಿಐ ಹಸನ ಸಾಬ್ ಅವರು ತನಿಖೆ ಕೈಗೊಳ್ಳಲಾಗಿದೆ ಎಂದು 'ಈಟಿವಿ ಭಾರತ'ಗೆ ತಿಳಿಸಿದರು. ಹಂಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.