ಬಳ್ಳಾರಿ: ಜಿಲ್ಲಾ ಪೊಲೀಸ್ ಇಲಾಖೆ ಕೊರೊನಾ ವೈರಸ್ ಬಗ್ಗೆ ವಿಭಿನ್ನ ಜಾಗೃತಿ ಮೂಡಿಸುತ್ತಿದೆ. ಕೊರೊನಾ ವೈರಸ್ ತಡೆಯಬೇಕಿದ್ರೆ ಸಾಮಾಜಿಕ ಅಂತರ ಬಹಳ ಮುಖ್ಯ. ಹಾಗಾಗಿ ಇಬ್ಬರುಕೊರೊನಾ ವೇಷಧಾರಿಗಳಿಂದ ಜಾಗೃತಿ ಮೂಡಿಸಲಾಗ್ತಿದೆ. ಕೊರೊನಾ ಸೋಂಕಿನ ಬಗೆಗೆ ಜನ ಇನ್ನೂ ಗಂಭೀರತೆ ಹೊಂದಿಲ್ಲ. ಹಾಗಾಗಿ ಇಂತಹ ವೇಷಧಾರಿಗಳ ಮೂಲಕ ಆ ರೋಗದ ಕುರಿತಂತೆ ಭಯ ಇರಬೇಕು ಅನ್ನೋದನ್ನ ಪೊಲೀಸರು ಹೇಳ ಹೊರಟಿದ್ದಾರೆ. ಆ ಮೂಲಕವಾದರೂ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಾರೆಂದು ಪೊಲೀಸರಿಗೆ ಅಂದುಕೊಂಡಿದ್ದಾರೆ.
ಬಳ್ಳಾರಿಯಲ್ಲಿರುವ ಈ ಎರಡು ಕೊರೊನಾ ವೈರಸ್‌ಗಳಿಗೆ ಕೈ-ಕಾಲುಗಳುಂಟು..
ನಗರದ ಮುನ್ಸಿಪಲ್ ಮೈದಾನದಲ್ಲಿ ಇಂದು ಬಳ್ಳಾರಿ ಜಿಲ್ಲಾ ಪೊಲೀಸ್ ವತಿಯಿಂದ ಕೊರೊನಾ ವೈರಸ್ ಜಾಗೃತಿ ಮೂಡಿಸಲಾಯಿತು.
ಈ ಕುರಿತು ಈಟಿವಿ ಭಾರತಗೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ ಅವರು ಪ್ರತಿಕ್ರಿಯಿಸಿ, ಭಾರತ ಲಾಕ್‌ಡೌನ್ ಆಗಿದೆ. ಜನರು ಈ ಕೊರೊನಾ ವೈರಸ್‌ನಿಂದ ಹೇಗೆ, ಸಾಮಾಜೀಕ ಅಂತಕ ಕಾಯ್ದುಕೊಳ್ಳಬೇಕು, ಕೈಗಳನ್ನು ಸ್ವಚ್ಛವಾಗಿ ತೊಳೆಯಬೇಕು. ಮಾಸ್ಕ್‌ಗಳನ್ನು ಧರಿಸಬೇಕು, ಜನರು ಈ ಮಾರುಕಟ್ಟೆಗಳಲ್ಲಿ ಅಂತರ ಕಾಯ್ದುಕೊಳ್ಳಬೇಕು ಎಂದು ಅನೇಕ ಬಾರಿ ಹೇಳಿದರೂ ಸಹ ಜನ ಕೇಳುತ್ತಿಲ್ಲ. ಬದಲಿಗೆ ಜನರಲ್ಲಿ ಈ ಕೊರೊನಾ ಬಗ್ಗೆ ಭಯದ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಈ ರೀತಿ ಜಾಗೃತಿ ಮೂಡಿಸಲಾಗ್ತಿದೆ ಎಂದರು.
ಇಬ್ಬರಿಗೆ ಭಯಬರುವಂತೆ ವೇಷ ಹಾಕಿಸಿ ಅದರಿಂದ ಜನರಿಗೆ ಗಂಭೀರತೆಯಾದ್ರೂ ಅರ್ಥವಾಗಲಿ ಅನ್ನೋ ಉದ್ದೇಶದಿಂದ ಈ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು.