ಬಳ್ಳಾರಿ: ನಗರದಲ್ಲಿ ತರಕಾರಿ, ಹಣ್ಣು-ಹಂಪಲಿನ ದರ ಹೆಚ್ಚಳವಾಗಿದೆ. ಹೋಲ್ ಸೇಲ್ ಮಾರುಕಟ್ಟೆಯಲ್ಲಿನ ಮೂಲ ದರಕ್ಕಿಂತಲೂ ದುಪ್ಪಟ್ಟು ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
ಬಳ್ಳಾರಿ ಮಾರುಕಟ್ಟೆ ಈಗ ಬಲು ದುಬಾರಿ... ಸ್ಥಳಾಂತರದಿಂದಲೇ ಆಯಿತು ಎಡವಟ್ಟು! - ಹೋಲ್ ಸೇಲ್ ಮಾರುಕಟ್ಟೆ
ಹೋಲ್ ಸೇಲ್ ಮಾರುಕಟ್ಟೆ ಹಾಗೂ ಸದ್ಯ ತಾತ್ಕಾಲಿಕವಾಗಿ ಸ್ಥಾಪಿಸಲಾಗಿರುವ ತರಕಾರಿ ಮಾರುಕಟ್ಟೆಗೆ ಹೋಲಿಕೆ ಮಾಡಿದ್ರೆ ಅಜಗಜಾಂತರ ವ್ಯತ್ಯಾಸ ಇದೆ. ಇಷ್ಟೊಂದು ದುಬಾರಿಯಾದ್ರೆ ಜೀವನ ನಿರ್ವಹಣೆಯೇ ದುಸ್ತರವಾಗಲಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಮಹಾಮಾರಿ ಕೋವಿಡ್ ಎರಡನೇ ಅಲೆ ಹೆಚ್ಚಳ ಹಿನ್ನೆಲೆ ಜಿಲ್ಲಾಡಳಿತ ಬಳ್ಳಾರಿಯ ಎಪಿಎಂಸಿಯಲ್ಲಿರುವ ತರಕಾರಿ ಮಾರುಕಟ್ಟೆಯನ್ನು ನಗರದ 7 ಕಡೆಗಳಿಗೆ ಸ್ಥಳಾಂತರಿಸಲಾಯಿತು. ಆದರೆ ಸಾರ್ವಜನಿಕರು ಆಯಾ ಮಾರುಕಟ್ಟೆಯಲ್ಲಿ ತರಕಾರಿ-ಹಣ್ಣು ಖರೀದಿಗೆ ಹೋದಾಗ ದುಬಾರಿ ದರದ ಬಿಸಿ ತಟ್ಟಿದೆ. ಈ ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಸಾರ್ವಜನಿಕರಿಗೆ ಮತ್ತಷ್ಟು ಆರ್ಥಿಕ ಹೊರೆಯಾಗಿದೆ.