ಕರ್ನಾಟಕ

karnataka

ETV Bharat / state

ಹೊಲಕ್ಕೆ ಹತ್ತಿ ಬಿಡಿಸಲು ಹೋಗಿದ್ದ ಬಾಲಕಿ ನಾಪತ್ತೆ: ದೂರು ದಾಖಲು - ಬಳ್ಳಾರಿ ಬಾಲಕಿ ಅಪಹರಣ ದೂರು ದಾಖಲು ಸುದ್ದಿ

ಆಗಸ್ಟ್ 8ರಂದು ಸಂಬಂಧಿಕರ ಹೊಲಕ್ಕೆ ಹತ್ತಿ ಬಿಡಿಸಲು ಹೋದ ಬಾಲಕಿ ಅಪಹರಣಕ್ಕೆ ಒಳಗಾಗಿದ್ದಾಳೆಂದು ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.

ಬಾಲಕಿ ಅಪಹರಣ
ಬಾಲಕಿ ಅಪಹರಣ

By

Published : Aug 19, 2020, 8:53 AM IST

ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮದ ಬಾಲಕಿಯೋರ್ವಳನ್ನ ನಿಗೂಢವಾಗಿ ಅಪಹರಿಸಲಾಗಿದೆ ಎಂದು ದೂರು ದಾಖಲಿಸಲಾಗಿದೆ.

ಧರ್ಮಸಾಗರ ಗ್ರಾಮದ ರೇಣುಕಾ (17) ಅಪಹರಣಕ್ಕೆ ಒಳಗಾಗದ ಬಾಲಕಿ ಎಂದು ಗುರುತಿಸಲಾಗಿದೆ. ಆಗಸ್ಟ್ 8ರಂದು ಸಂಬಂಧಿಕರ ಹೊಲಕ್ಕೆ ಹತ್ತಿ ಬಿಡಿಸಲು ಹೋದ ಸಮಯದಲ್ಲಿ ಅಪಹರಣಕ್ಕೆ ಒಳಗಾಗಿದ್ದಾಳೆಂದು ಹೇಳಲಾಗುತ್ತಿದೆ.

ಈ ಬಾಲಕಿ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ಗಾದಿಗನೂರು ಪೊಲೀಸ್ ಠಾಣೆಯ ಸ್ಥಿರ ದೂರವಾಣಿ ಸಂಖ್ಯೆ 08394-248033 ಅಥವಾ ಬಳ್ಳಾರಿ ಎಸ್ಪಿ ಕಚೇರಿಯ ಸ್ಥಿರ ದೂರವಾಣಿ ಸಂಖ್ಯೆ 08392-258400, ಕೂಡ್ಲಿಗಿ ಡಿಎಸ್​​ಪಿ ಸ್ಥಿರ ದೂರವಾಣಿ ಸಂಖ್ಯೆ: 08391-220326 ಹಾಗೂ ಸಂಡೂರ ಸಿಪಿಐ ಸ್ಥಿರ ದೂರವಾಣಿ ಸಂಖ್ಯೆ 08395-260100ಕ್ಕೆ ಸಂಪರ್ಕಿಸಬೇಕೆಂದು ಗಾದಿಗನೂರು ಪೊಲೀಸ್ ಠಾಣೆಯ ಸಬ್ ಇನ್ಸ್​​ಪೆಕ್ಟರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ABOUT THE AUTHOR

...view details