ಬಳ್ಳಾರಿ:ಉತ್ತರ ಕರ್ನಾಟಕ ಭಾಗದ ಬೆಳಗಾವಿ ಸೇರಿದಂತೆ ರಾಜ್ಯದ ನಾನಾಕಡೆ ಸಂಭವಿಸಿದ ಜಲಪ್ರಳಯದಲ್ಲಿ ಆಸ್ತಿ-ಪಾಸ್ತಿ ಕಳೆದುಕೊಂಡ ಸಂತ್ರಸ್ತರ ನೆರವಿಗೆ ಜಿಲ್ಲೆಯ ಕೊಟ್ಟೂರು ತಾಲೂಕಿನ ದೂಪದಹಳ್ಳಿ ತಾಂಡಾದ ಜನರು ಮುಂದಾಗಿದ್ದಾರೆ.
ನೆರೆ ಸಂತ್ರಸ್ತರಿಗೆ ತಾಂಡಾ ಜನರ ಸಹಾಯಹಸ್ತ: ರೊಟ್ಟಿ ಧವಸ, ಧಾನ್ಯಗಳ ಪೂರೈಕೆ - ನೆರೆ ಸಂತ್ರಸ್ತರ ನೆರವಿಗೆ ಮುಂದಾದ ತಾಂಡಾ ಜನರು
ನೆರೆ ಸಂತ್ರಸ್ತರಿಗಾಗಿ ತಾಂಡವೊಂದರ ಜನರು ಧವಸ, ಧಾನ್ಯಗಳ ಪಾಕೇಟ್ಗಳನ್ನು ನೆರೆ ಸಂತ್ರಸ್ತರಿಗೆ ಕಳುಹಿಸಿ ಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ದವಸ, ಧಾನ್ಯಗಳ ಪೂರೈಕೆ
ದೂಪದಹಳ್ಳಿ ತಾಂಡಾದ ಪ್ರತಿಯೊಂದು ಮನೆಯಿಂದ ಅಕ್ಕಿ, ಬೇಳೆ, ಖಡಕ್ ರೊಟ್ಟಿ, ಚಟ್ನಿ, ಸೇರಿದಂತೆ ನಾನಾ ಧವಸ, ಧಾನ್ಯಗಳುಳ್ಳ ಪಾಕೇಟ್ಗಳನ್ನು ತಯಾರಿಸಿ ನೆರೆ ಸಂತ್ರಸ್ತರಿಗೆ ಕಳುಹಿಸಿ ಕೊಡುವ ವ್ಯವಸ್ಥೆಯನ್ನು ಮಾಡಿದ್ದಾರೆ.
ತಾಂಡಾದ ಗುರು,ಹಿರಿಯರ ಸಮ್ಮುಖದಲ್ಲೇ ಸಂತ್ರಸ್ತರ ನೆರೆವಿಗೆ ಮುಂದಾಗಿದ್ದು, ಬೆಳಗಾವಿ ನೆರೆ ಸಂತ್ರಸ್ತರಿಗೆ ಮುಟ್ಟಿಸುವ ಜವಾಬ್ದಾರಿಯನ್ನು ತಾಂಡಾದ ಪ್ರಮುಖರು ವಹಿಸಿಕೊಂಡಿದ್ದಾರೆ.