ಹೊಸಪೇಟೆ:ಹೊಸಪೇಟೆಯ ಅಂಚೆ ವಿಭಾಗದ ಹತ್ತು ಗ್ರಾಮಗಳು ಸಂಪೂರ್ಣ ಕೇಂದ್ರ ಸರ್ಕಾರದ ಸುಕನ್ಯ ಸಮೃದ್ಧಿ ಯೋಜನೆಯ ಗ್ರಾಮಗಳಾಗಿವೆ. ಪಾಲಕರು ಹೆಣ್ಣು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಈ ಯೋಜನೆ ನೆರವನ್ನು ಪಡೆಯುತ್ತಿದ್ದಾರೆ.
ಹೊಸಪೇಟೆ ಅಂಚೆ ವಿಭಾಗ; ಹತ್ತು ಗ್ರಾಮ 'ಸಂಪೂರ್ಣ ಸುಕನ್ಯ ಸಮೃದ್ಧಿ ಯೋಜನೆ' ಗ್ರಾಮಗಳು - Sukanya Prosperity Project
ಹೊಸಪೇಟೆ ಅಂಚೆ ವಿಭಾಗದ ಹತ್ತು ಗ್ರಾಮಗಳು ಕೇಂದ್ರ ಸರಕಾರd ಸುಕನ್ಯ ಸಮೃದ್ಧಿ ಯೋಜನೆಯ ಲಾಭ ಪಡೆದಿವೆ.
ಈ ಹಿಂದೆ ಹೆಣ್ಣು ಹುಟ್ಟಿದರೆ ಗೋಳಾಡುವ ಪರಿಸ್ಥಿತಿ ಇತ್ತು. ಆದರೆ, ಈಗ ಕಾಲಮಾನ ಬದಲಾಗಿದೆ. ಗಂಡು ಮಕ್ಕಳಿಗೆ ನೀಡಿದ ಪ್ರಾಶಸ್ತ್ಯವನ್ನು ಹೆಣ್ಣು ಮಕ್ಕಳಿಗೆ ಸಹ ಪಾಲಕರು ನೀಡುತ್ತಿದ್ದಾರೆ. ಅದಕ್ಕೆ, ತಾಜಾ ಉದಾಹರಣೆ ಸುಕನ್ಯ ಸಮೃದ್ಧಿ ಯೋಜನೆಯ ಗ್ರಾಮಗಳು. ಕೊಂಡನಾಯಕಹಳ್ಳಿ, ಮಲಪನಗುಡಿ, ಗಾದಿಗನೂರ, ಹಾರೋವನಹಳ್ಳಿ, ಹಗರಿಬೊಮ್ಮನಹಳ್ಳಿಯ ಬೆಣಕಲ್ಲು, ಏಣಗಿ, ಹಳೆ ಬಾಚಿನಕೊಂಡಹಳ್ಳಿ, ತೋರಗಲ್ಲಿನ ಬಳಿಯ ತಾಳೂರು, ಹೂವಿನಹಡಗಲಿಯ ಕಾಲ್ವಿ ಹಳ್ಳಿಗಳು ಸಂಪೂರ್ಣ ಸುಕನ್ಯ ಸಮೃದ್ಧಿ ಯೋಜನೆಯ ಗ್ರಾಮಗಳಾಗಿವೆ. ಈ ಹತ್ತು ಗ್ರಾಮಗಳಲ್ಲಿ ಒಟ್ಟು 1400 ಖಾತೆಗಳನ್ನು ತೆರೆಯಲಾಗಿದೆ. ಈ ಗ್ರಾಮಗಳಲ್ಲಿನ ಹತ್ತು ವರ್ಷದ ಹೆಣ್ಣು ಮಕ್ಕಳು ಈ ಯೋಜನೆಗೆ ಒಳಪಟ್ಟಿದ್ದಾರೆ.
ಸುಕನ್ಯ ಸಮೃದ್ಧಿ ಯೋಜನೆಯ ವೈಶಿಷ್ಟ: ಹತ್ತು ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಯೋಜನೆ ಇದಾಗಿದೆ. ಹೆಣ್ಣು ಮಗುವಿನ ಹೆಸರಿನ ಮೇಲೆ ಒಂದು ಸಾವಿರ ರೂ. ಮೇಲೆ ಖಾತೆ ತೆರೆಯಬೇಕಾಗುತ್ತದೆ. ವರ್ಷದಲ್ಲಿ ಕನಿಷ್ಠ 250 ರೂ. ದಿಂದ ಗರಿಷ್ಠ 1.5. ಲಕ್ಷದವರೆಗೆ ಹಣ ಈ ಯೋಜನೆ ಮೂಲಕ ಪಾವತಿಸಬಹುದು. ಮೂರು ತಿಂಗಳಿಗೊಮ್ಮೆ ಬಡ್ಡಿ ದರವನ್ನು ಸರ್ಕಾರ ನಿಗದಿ ಮಾಡಲಿದೆ. ಹೆಣ್ಣು ಮಗುವಿಗೆ 18 ವರ್ಷವಾದ ಬಳಿಕ ಹಣ ಕೈ ಸೇರಲಿದೆ. ಈ ಹಣವನ್ನು ಪಾಲಕರು ಹೆಣ್ಣು ಮಗುವಿನ ಶಿಕ್ಷಣ ಹಾಗೂ ವಿವಾಹಕ್ಕೆ ಖರ್ಚು ಮಾಡುವುದಕ್ಕೆ ಅನಕೂಲವಾಗಲಿದೆ. ಒಂದು ಕುಟುಂಬದಲ್ಲಿ ಇಬ್ಬರು ಹೆಣ್ಣು ಮಕ್ಕಳು ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.